RTC Aadhar link : ಮೊಬೈಲ್‌ನಲ್ಲೇ ರೈತರ ಜಮೀನು ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸರಳ ವಿಧಾನ

Share this Post

RTC Aadhar link : ಕಂದಾಯ ಇಲಾಖೆಯು ರೈತರು ತಮ್ಮ ಆರ್‌ಟಿಸಿ ಉತಾರ ಹಾಗೂ ಪಹಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಘೋಷಿಸಿದೆ. ನಿಗದಿತ ಅವಧಿಯೊಳಗೆ ಆಧಾರ್ ಪಹಣಿ ಲಿಂಕ್ ಮಾಡದೇ ಹೋದರೆ ರೈತರಿಗೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನೆ ಸಿಗುವುದಿಲ್ಲ ಎಂದು ಕಂದಾಯ ಇಲಾಖೆ ಎಚ್ಚರಿಸಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರವು ಆಧಾರ್ ಕಾಯ್ದೆ ಕಲಂ 4 (4) ಬಿ (2) (Section 4 (4) B (2) of the Aadhaar Act) ಅಡಿಯಲ್ಲಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ಹಾಗಾದರೆ, ರೈತರ ಜಮೀನಿನ ಪಹಣಿ ಅಥವಾ ಉತಾರಗಳಿಗೆ ಆಧಾರ್ ಲಿಂಕ್ ಮಾಡಿಸುವುದು ಏಕೆ ಕಡ್ಡಾಯ? ಅದರಿಂದ ರೈತರಿಗೇನು ಪ್ರಯೋಜನ? ಸ್ವತಃ ರೈತರೇ ತಮ್ಮ ಮೊಬೈಲ್‌ನಲ್ಲಿ ಆಧಾರ್ ಲಿಂಕ್ ಮಾಡಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಂದಾಯ ಸಚಿವರ ಮಾಹಿತಿ…

ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗರೇ ಸ್ವಂತ ಜಮೀನು ಹೊಂದಿರುವ ರೈತರ ಮನೆ ಬಾಗಿಲಿಗೆ ತೆರಳಿ ಆರ್‌ಟಿಸಿ-ಆಧಾರ್ ಜೋಡಣೆ ಕೆಲಸದಲ್ಲಿ ತೊಡಗಿದ್ದಾರೆ. 88,000 ಆರ್‌ಟಿಸಿಗಳಲ್ಲಿ ಕೃಷಿ ಭೂಮಿ ಇರುವುದು ಕಂಡುಬAದಿದೆ. ಇವುಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ.

ಮೊದಲು ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಪಡಿಸಲು ನಿಖರವಾದ ಆಕಾರ್ ಬಂದ್ ಮಾಹಿತಿ ಪಡೆಯಬೇಕು. ನಿಖರವಾದ ಆಕಾರ್ ಬಂದ್ ಇಲ್ಲದೇ ಆರ್‌ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್ ಬಂದ್ ಡಿಜಿಟಲೀಕರಣಗೊಳಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?

ಪಹಣಿ-ಆಧಾರ್ ಜೋಡಣೆಯಾದರೆ ಸಿಗುವ ಪ್ರಯೋಜನಗಳು

  • ಪಹಣಿ-ಆಧಾರ್ ಲಿಂಕ್ ಮಾಡುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಅನುಕೂಲವಾಗುತ್ತದೆ. ಜಮೀನು ಮಾಲೀಕತ್ವ ಖಾತರಿಪಡಿಸಲು ಸಹಕಾರಿಯಾಗುತ್ತದೆ.
  • ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಭೂ ವಂಚನೆಯೂ ಸೇರಿದಂತೆ ಜಮೀನು ಸಂಬAಧಿತ ಎಲ್ಲ ರೀತಿಯ ಅಕ್ರಮಗಳಿಗೂ ಇದರಿಂದ ಕಡಿವಾಣ ಬೀಳುತ್ತದೆ.
  • ಸರ್ಕಾರ ಒದಗಿಸಿದ ಆಧಾರ್ ಆಧಾರಿತ ದತ್ತಾಂಶಗಳಿ೦ದ ಬರ ಪರಿಹಾರ ಸೇರಿದಂತೆ ಎಲ್ಲ ರೀತಿಯ ಬೆಳೆ ಪರಿಹಾರವನ್ನು ನೇರವಾಗಿ ಪಡೆಯಲು ಅನುಕೂಲವಾಗುತ್ತದೆ.

ಆಧಾರ್ ಲಿಂಕ್ ಮಾಡಿಸುವ ವಿಧಾನಗಳು

ಜಮೀನು ಪಹಣಿಗೆ ಆಧಾರ್ ನಂಬರ್ ಲಿಂಕ್ ಮಾಡಲು ರೈತರು ಹೆಚ್ಚು ಪರದಾಡಬೇಕಿಲ್ಲ. ಈ ಕೆಳಗಿನ ಸುಲಭ ವಿಧಾನಗಳನ್ನು ಅನುಸರಿಸಿ ಯಶಸ್ವಿಯಾಗಿ ಜೋಡಣೆ ಮಾಡಬಹುದು.

ವಿಧಾನ 1: ನಿಮ್ಮ ಜಮೀನು ಪಹಣಿ ಮತ್ತು ಆಧಾರ ಕಾರ್ಡ್’ನೊಂದಿಗೆ ನಿಮ್ಮ ಗ್ರಾಮಕ್ಕೆ ಸಂಬ೦ಧಿಸಿದ ಗ್ರಾಮ ಲೆಕ್ಕಾಧಿಕಾರಿಯವರನ್ನು ಭೇಟಿ ಮಾಡಿ ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು.

ವಿಧಾನ 2: ಹತ್ತಿರವಿರುವ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಕೂಡ ಪಹಣಿ ಆಧಾರ್ ಜೋಡಣೆ ಮಾಡಿಸಬಹುದು. ಮತ್ತೊಂದು ಸರಳ ವಿಧಾನವೆಂದರೆ ನಿಮ್ಮ ಮೊಬೈಲ್‌ನಲ್ಲಿ ನೀವೇ ಲಿಂಕ್ ಮಾಡಿಕೊಳ್ಳಬಹುದು.

ಮೊಬೈಲ್‌ನಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡಿಸುವ ವಿಧಾನ

ನಿಮ್ಮ ಮೊಬೈಲ್ ಮೂಲಕವೇ ಕಂದಾಯ ಇಲಾಖೆಯ (Department of Revenue) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಜಮೀನು ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು. ಕಂದಾಯ ಇಲಾಖೆಯ ಡೈರೆಕ್ಟ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಆ ಲಿಂಕ್ ಕ್ಲಿಕ್ ಮಾಡಿದರೆ, ಸರಕಾರದ ‘ಭೂಮಿ ನಾಗರಿಕ ಸೇವೆಗಳು’ (Bhoomi Citizen Services) ವೆಬ್ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ ಕೋಡ್ ನಮೂದಿಸಿ ಸೆಂಡ್ ಓಟಿಪಿ (SEND OTP) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ನಂಬರಿಗೆ ಬರುವ ಆರು ಅಂಕಿಯ ಒಟಿಪಿಯನ್ನು ಎಂಟರ್ ಮಾಡಿ ಲಾಗಿನ್ ಎಂಬ ಆಯ್ಕೆ ನಮೂದಿಸಿ ಕ್ಲಿಕ್ ಮಾಡಿ.

ಮೊಬೈಲ್ ನಂಬರ್ ಬಳಸಿ ಲಾಗಿನ್ ಆದ ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ. ಹೊಸ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ನಿಮ್ಮ ಆಧಾರ್ ಕಾರ್ಡ್’ನಲ್ಲಿರುವಂತೆ ನಿಮ್ಮ ಹೆಸರನ್ನು ಇಂಗ್ಲಿಷ್’ನಲ್ಲಿ ಟೈಪ್ ಮಾಡಿ ವೇರಿಫೈ (Verify) ಎಂಬ ಆಯ್ಕೆ ಮೇಲೆ ಒತ್ತಿದರೆ ಯಶಸ್ವಿಯಾಗಿ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಆಗುತ್ತದೆ.

RTC ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ 

ಇದನ್ನೂ ಓದಿ: Incentive for the simple Marriage : ಸರಳ ವಿವಾಹಕ್ಕೆ ₹50,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ…


Share this Post
WhatsApp Group Join Now
Telegram Group Join Now
error: Content is protected !!