Pradhan Mantri Awas Yojana 2024 : ಸ್ವಂತ ಮನೆ ಕಟ್ಟಿಕೊಳ್ಳಲು ಸರಕಾರದ ಸಾಲ ಮತ್ತು ಸಬ್ಸಿಡಿ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

Share this Post

Pradhan Mantri Awas Yojana 2024 : ಕೇಂದ್ರ ಸರ್ಕಾರವು ದೇಶದ ಪ್ರತಿಯೊಬ್ಬ ಬಡ ಜನರು ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ನೆರವಾಗುವಂತೆ ಅರ್ಹ ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ..

WhatsApp Group Join Now
Telegram Group Join Now

ಶ್ರೀಮಂತ ವ್ಯಕ್ತಿಯಿಂದ ಹಿಡಿದು ಬಡ ವ್ಯಕ್ತಿಗೂ ಕೂಡ ಜೀವನದ ಅತಿ ದೊಡ್ಡ ಕನಸೆಂದರೆ ಅದು ಸ್ವಂತ ಮನೆಯನ್ನು ಕಟ್ಟಿಕೊಳ್ಳುವುದು. ಆದರೆ ಬಹಳಷ್ಟು ಜನರಿಗೆ ಆರ್ಥಿಕ ಸಮಸ್ಯೆಯಿಂದ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ.

ದೇಶದ ಪ್ರತಿಯೊಬ್ಬ ಬಡರು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಜೂನ್ 2015ರಲ್ಲಿ ಜಾರಿಗೆ ತಂದ ಈ ಯೋಜನೆಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana -PMAY).

ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ಸಬ್ಸಿಡಿ ಹಣವನ್ನು ನೀಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಫಲಾನುಭವಿಗಳಿಗೆ ಸಿಗುವ ಲಾಭಗಳೇನು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.

1 ಲಕ್ಷ ರೂಪಾಯಿ ಸಹಾಯಧನ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

PMAY ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಹರಾದ ಫಲಾನುಭವಿಗಳಿಗೆ ಭಾರತ ಕೇಂದ್ರ ಸರ್ಕಾರವು ಸ್ವಂತ ಮನೆ ಕಟ್ಟಿಕೊಳ್ಳಲು ಪ್ರತಿ ಮನೆಗೂ 1 ಲಕ್ಷ ರೂಪಾಯಿ ಸಹಾಯಧನ ನೀಡುತ್ತದೆ. ಸಹಾಯಧನದ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಯೋಜನೆಯಲ್ಲಿ ಪಡೆದ ನಿಮ್ಮ ಗೃಹ ಸಾಲದ ಮೇಲೆ 6.5% ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ನೀವು ಪಡೆದುಕೊಳ್ಳುವ ಗೃಹ ಸಾಲದ ಮರುಪಾವತಿ ಅವಧಿ 20 ವರ್ಷ.

ಈ ಯೋಜನೆಯನ್ನು ಪಡೆಯಲು ಯಾರು ಅರ್ಹರು?

  • ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.
  • ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಸ್ವಂತ ಮನೆಯನ್ನು ಹೊಂದಿರಬಾರದು.
  • ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಇದಕ್ಕೂ ಮುನ್ನ, ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಇತರೆ ಯಾವುದೇ ವಸತಿ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದಿರಬಾರದು.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಮುಖವಾಗಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ.

ಅರ್ಜಿದಾರರ ವಾರ್ಷಿಕ ವರಮಾನದ ವಿವರ

EWS ವರ್ಗದ ಅಭ್ಯರ್ಥಿಗಳ ವಾರ್ಷಿಕ ಆದಾಯವು 6 ಲಕ್ಷದ ಒಳಗಿರಬೇಕು. LIG (Low Income Group) ವರ್ಗದ ಅಭ್ಯರ್ಥಿಗಳ ವಾರ್ಷಿಕ ಆದಾಯವು 6 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ ಒಳಗಿರಬೇಕು. MIG I (Middle Income Group I) ವರ್ಗದ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು 12 ಲಕ್ಷ ರೂಪಾಯಿಯಿಂದ 18 ಲಕ್ಷ ರೂಪಾಯಿ ಒಳಗಿರಬೇಕು. ಇನ್ನು MIG II (Middle Income Group) ವರ್ಗದ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು 18 ಲಕ್ಷ ಮೇಲಿರಬಾರದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು

  • ಅರ್ಜಿದಾರರ ಆಧಾರ್ ಕಾರ್ಡ್
  • ವಿಳಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆ ಪುಸ್ತಕ
  • ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಧಿಕೃತ ಜಾಲತಾಣದ ವೆಬ್‌ಸೈಟ್ ಲಿಂಕ್ ಅನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ.

ಕೆಳಗಿನ ಲಿಂಕ್ ಬಳಸಿಕೊಂಡು ನಿಮ್ಮ ಮೊಬೈಲ್’ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಲಿಂಕ್ : https://pmaymis.gov.in/


Share this Post
WhatsApp Group Join Now
Telegram Group Join Now
error: Content is protected !!