Bank Service Fee Details : ಬ್ಯಾಂಕ್’ನಲ್ಲಿ ಯಾವುದೇ ಕೆಲಸವಾಗಬೇಕೆಂದರು ನಮಗೆ ಗೊತ್ತಿರುವ ಹಾಗೆಯೋ, ಗೊತ್ತಿಲ್ಲದೆಯೋ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಯಾವ ಸೇವೆಗಳಿಗೆ ಎಷ್ಟು ಸೇವಾ ಶುಲ್ಕವಿದೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತ ದೇಶವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇತ್ತೀಚೆಗೆ ಸಾಕಷ್ಟು ರೂಪಾಂತರಗೊ೦ಡಿದೆ. ಹಣ ಬಿಡಿಸಿಕೊಳ್ಳಲು (Money Withdraw) ಅಥವಾ ಜಮಾ ಮಾಡಲು (Money deposit) ಮೊದಲಿನ ಹಾಗೆ ನಾವು ಬ್ಯಾಂಕಿಗೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಈಗಿಲ್ಲ. ಏಕೆಂದರೆ ಇತ್ತೀಚಿನ ಈ ದಿನಗಳಲ್ಲಿ ಪ್ರತಿಯೊಂದು ಕಾರ್ಯವು ಡಿಜಿಟಲ್ ಆಗಿ ರೂಪಾಂತರಗೊಳ್ಳುತ್ತಿದೆ. (Digitalization). ಪ್ರತಿಯೊಂದು ಡಿಜಿಟಲ್ ಆಗಿ ರೂಪಾಂತರಗೊಳ್ಳುತ್ತಿರುವುದರಿ೦ದ ಬ್ಯಾಂಕುಗಳ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ಆದರೂ ಸಹ ಬ್ಯಾಂಕುಗಳು ಗ್ರಾಹಕರ ಮೇಲೆ ವಿಧಿಸುತ್ತಿರುವ ಸೇವಾ ಶುಲ್ಕವನ್ನು ಮತ್ತು ದಂಡ ಪ್ರಮಾಣವನ್ನು ಕಡಿಮೆ ಮಾಡುತ್ತಿಲ್ಲ.
ಇದನ್ನೂ ಓದಿ: Lok Sabha Election Holiday Declaration : ಎಲ್ಲಾ ನೌಕರರು, ಕಾರ್ಮಿಕರಿಗೆ ಸಂಬಳ ಸಹಿತ ರಜೆ | ಚುನಾವಣಾ ಆಯೋಗದ ಆದೇಶ
35,587 ಕೋಟಿ ರೂ. ಶುಲ್ಕ ಸಂಗ್ರಹ
ಗ್ರಾಹಕರು ಪಡೆದುಕೊಳ್ಳುತ್ತಿರುವ ಪ್ರತಿಯೊಂದು ಕಾರ್ಯಗಳಿಗೆ ಸಹ ಬ್ಯಾಂಕುಗಳು ಸೇವಾ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಬ್ಯಾಂಕ್ ಖಾತೆಗೆ ಮೊಬೈಲ್ ಲಿಂಕ್ ಮಾಡಿಸುವುದರಿಂದ ಹಿಡಿದು ಗ್ರಾಹಕರ ಖಾತೆಗೆ SMS ಮೂಲಕ ಮಾಹಿತಿ ಕಳಿಸುವುದಕ್ಕೂ ಕೂಡ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಸೇವಾ ಶುಲ್ಕದಿಂದ ಬ್ಯಾಂಕುಗಳು ದೊಡ್ಡಮಟ್ಟದ ಗಳಿಕೆಯನ್ನು ಮಾಡುತ್ತಿವೆ.
ಹಿಂದಿನ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ 2018 ರಿಂದ 2023ರ ಐದು ವರ್ಷಗಳ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್’ಗಳು ವಿಧಿಸಿರುವ ಒಟ್ಟು ಸೇವಾ ಶುಲ್ಕದ ಮೊತ್ತ 35,587 ಕೋಟಿ ರೂಪಾಯಿ ಎಂಬುದು ಆಶ್ಚರ್ಯಕರ ವಿಷಯ.
ಯಾವ ಸೇವೆಗಳಿಗೆ ಎಷ್ಟು ಸೇವಾ ಶುಲ್ಕ?
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವುದರಿಂದ ಹಲರು ಮೊಬೈಲ್ ಸಂಖ್ಯೆಯನ್ನು ಬದಲಾಯಿಸುತ್ತಿದ್ದು, ಬದಲಾಯಿಸಿದ ಮೊಬೈಲ್ ಸಂಖ್ಯೆಯನ್ನು ಪ್ರತಿಯೊಬ್ಬರು ಬ್ಯಾಂಕ್ ಖಾತೆಗೆ ಲಿಂಕ್ (Mobile number link) ಮಾಡಿಸುತ್ತಿದ್ದಾರೆ. ಈ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಲು ನಾವು ನೀಡಬೇಕಾದ ಸೇವಾ ಶುಲ್ಕದ ಮೊತ್ತ 59 ರೂ. ಹಾಗೆಯೇ ಇಮೇಲ್ ಐಡಿ ಹೊಸದಾಗಿ ಸೇರಿಸಲು ಮತ್ತು ಅಪ್ಡೇಟ್ ಮಾಡಿಸಲು ಕೂಡ 59 ರುಪಾಯಿಯ ಸೇವಾ ಶುಲ್ಕವನ್ನು (Service Fee) ಪಾವತಿಸಬೇಕು.
ನಮ್ಮ ಬ್ಯಾಂಕ್ ಖಾತೆಯಲ್ಲಿ ನಮ್ಮ ಹೆಸರು ಮತ್ತು ವಿಳಾಸವನ್ನು ತಿದ್ದುಪಡಿ ಮಾಡಿಸಲು ಹಾಗೂ ವಿಳಾಸದ ಬದಲಾವಣೆಯನ್ನು ಮಾಡಿಸಲು ಕೂಡ 59 ಸೇವಾ ಶುಲ್ಕವನ್ನು ವಸೂಲಿ ಮಾಡುತ್ತಾರೆ.
ನಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಸಂಖ್ಯೆಯನ್ನು (PAN Card Number Link) ಸೇರಿಸಲು ಕೂಡ 59 ರೂ. ಸೇವಾ ಶುಲ್ಕವಿದೆ. ನಮ್ಮ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಲು ಕೂಡ 59 ರೂಪಾಯಿಯ ಸೇವಾ ಶುಲ್ಕವಿದೆ.
ಇದನ್ನೂ ಓದಿ: Aadhaar Card Update : ಆಧಾರ್ ಅಪ್ಡೇಟ್ | ನಿಮ್ಮ ಮೊಬೈಲ್‌ನಲ್ಲೇ ಅಪ್ಡೇಟ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ…
ಬ್ಯಾಂಕ್ ಚೆಕ್’ಗಳ ಸೇವಾ ಶುಲ್ಕ
1 ಲಕ್ಷ ರೂಪಾಯಿ ತನಕ ನಿಮ್ಮ ಚೆಕ್ ಇದ್ದರೆ ಇದಕ್ಕೆ ಯಾವುದೇ ರೀತಿಯ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅದೇ ಒಂದು ವೇಳೆ ಇದಕ್ಕಿಂತ ಹೆಚ್ಚಿನ ಮೊತ್ತವಿದ್ದರೆ, ಕ್ಲೀಯರೆನ್ಸ್ ಶುಲ್ಕವಾಗಿ 150 ರೂಪಾಯಿಯನ್ನು ಪಾವತಿಸಬೇಕು. ಹಾಗೆಯೆ ನಿರ್ದಿಷ್ಟ ಸಂಖ್ಯೆಯ ಚಕ್’ಗಳನ್ನು ಮಾತ್ರ ನಿಮಗೆ ಉಚಿತವಾಗಿ ನೀಡುತ್ತಾರೆ. ಇದಕ್ಕಿಂತ ಹೆಚ್ಚಿನ ಚಕ್’ಗಳನ್ನು ನೀವು ಪಡೆಯಬೇಕೆಂದರೆ, ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಉದಾಹರಣೆಗೆ ಎಸ್‌ಬಿಐ ಬ್ಯಾಂಕ್ ನಮ್ಮ ಉಳಿತಾಯ ಖಾತೆಗೆ 10 ಚೆಕ್’ಗಳನ್ನು ಮಾತ್ರ ಉಚಿತವಾಗಿ ನೀಡುತ್ತದೆ.
ಎಟಿಎಂ ವಹಿವಾಟುಗಳಿಗೆ ಎಷ್ಟು ಶುಲ್ಕ? ATM Service Charges
ಎಟಿಎಂನಿ೦ದ ಹಣ ವಿತ್ ಡ್ರಾ ಮಾಡಿಕೊಳ್ಳುವ ಸೌಲಭ್ಯವು ನಿರ್ದಿಷ್ಟ ಅವಧಿಯ ವರೆಗೆ ಮಾತ್ರ ಉಚಿತವಾಗಿರುತ್ತದೆ. ನಿರ್ದಿಷ್ಟ ಮಿತಿಯನ್ನು ಮೀರಿದರೆ ಹೆಚ್ಚಿನ ಎಟಿಎಂ ನಗದು ವಹಿವಾಟುಗಳಿಗೆ ಬ್ಯಾಂಕುಗಳು ಶುಲ್ಕವನ್ನು ವಿಧಿಸುತ್ತವೆ. ಹೆಚ್ಚಿನ ಬ್ಯಾಂಕುಗಳು, ಅವರದೇ ಆದ ಬ್ಯಾಂಕಿನ ಎಟಿಎಂನಲ್ಲಿ ತಿಂಗಳಿನಲ್ಲಿ 5 ವಹಿವಾಟುಗಳನ್ನು ಉಚಿತವಾಗಿ ನೀಡುತ್ತಾರೆ. ನಂತರದ ನಗದು ವಹಿವಾಟುಗಳಿಗೆ 20 ರಿಂದ 50 ರೂ. ಶುಲ್ಕವನ್ನು ವಿಧಿಸಲಾಗುತ್ತದೆ.
ಒಂದು ವೇಳೆ ನಿಮ್ಮ ATM ಕಾರ್ಡ್ ಕಳೆದು ಹೋದಲ್ಲಿ ಅದನ್ನು ಬ್ಲಾಕ್ ಮಾಡಿಸಲು ಕೂಡ 177 ರೂ. ಶುಲ್ಕ ವಿಧಿಸಲಾಗುತ್ತದೆ. ಇನ್ನೂ ಹೊಸ ಎಟಿಎಂ ಕಾರ್ಡ್ ಪಡೆಯಲು ಹಾಗೂ ಹೊಸ ಕ್ರೆಡಿಟ್ ಕಾರ್ಡ್ (New Credit Card) ಪಡೆಯಲು ಕೂಡ ಶುಲ್ಕವನ್ನು ವಿಧಿಸಲಾಗುವುದು. ಶುಲ್ಕವು ಒಂದು ಬ್ಯಾಂಕಿನಿAದ ಮತ್ತೊಂದು ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ.
SMS Charges
ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರ್’ಗೆ ಯಾವುದೇ ರೀತಿಯ ಹಣ ವರ್ಗಾವಣೆಯಾದಲ್ಲಿ ಅದಕ್ಕೂ ಕೂಡ ಬ್ಯಾಂಕಗಳು ಶುಲ್ಕವನ್ನು ವಿಧಿಸುತ್ತವೆ. ಆದರೆ ಈ ಶುಲ್ಕವು ಸಣ್ಣ ಮೊತ್ತದಾಗಿರುತ್ತದೆ.
ಬ್ಯಾಂಕುಗಳು ಈ ರೀತಿ ಹಲವಾರು ಸೇವೆಗಳಿಗೆ ವಿಧಿಸುವ ಶುಲ್ಕವು ಒಂದು ಬ್ಯಾಂಕಿನಿ೦ದ ಮತ್ತೊಂದು ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ನೀವು ಯಾವ ಬ್ಯಾಂಕಿನಲ್ಲಿ ಖಾತೆ ಹೊಂದಿರುತ್ತೀರೋ, ಆ ಬ್ಯಾಂಕಿಗೆ ಭೇಟಿ ನೀಡಿ ಎಲ್ಲಾ ರೀತಿಯ ಶುಲ್ಕಗಳ ವಿವರವನ್ನು ನೀವು ಪಡೆಯಬಹುದಾಗಿದೆ.
ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?