Mundari Adivasis : ಇವರು ಗೋವುಗಳನ್ನು ತಮ್ಮ ಜೀವಕ್ಕಿಂತ ಹೆಚ್ಚು ಪ್ರೀತಿಸುವವರು. ಗೋವಿನ ರಕ್ಷಣೆಗಾಗಿ (Cow Protection) ಪ್ರಾಣವನ್ನೇ ಅರ್ಪಿಸಲು ಅಂಜದವರು. ಇವರ ಪಾಲಿಗೆ ಗೋವು ಅಕ್ಷರಶಃ ಬದುಕು. ಗೋವು (Cow) ಇವರಿಗೆ ಸರ್ವಸ್ವ. ಈ ‘ಮುಂದರಿ’ ಗೋ ರಕ್ಷಕ ಆದಿವಾಸಿ ಜನಾಂಗವಿರುವುದು (Mundari Adivasis South Sudan) ದಕ್ಷಿಣ ಸೂಡಾನಲ್ಲಿ. ಇವರ ಮುಖ್ಯ ಸ್ಥಳ ದಕ್ಷಿಣ ಸೂಡಾನ್ ರಾಜಧಾನಿ ‘ಜುಬಾ’ದಿಂದ ಸುಮಾರು 75 ಕಿಲೋ ಮೀಟರ್ ಉತ್ತರಕ್ಕಿರುವ ಗುಡ್ಡಗಾಡಿನ ಹುಲ್ಲುಗಾವಲು (Hill pasture) ಪ್ರದೇಶ. ಇವರ ಮುಖ್ಯ ಆಸ್ತಿಯೇ ಗೋವುಗಳು.
ಕಟ್ಟುಮಸ್ತಾದ ದೇಹ ಹೊಂದಿರುವ ಇವರು ತಮ್ಮ ಆಹಾರದಲ್ಲಿ ಯಥೇಚ್ಚವಾಗಿ ಹಾಲು, ಮೊಸರನ್ನು ಬಳಸುತ್ತಾರೆ. ಆರಡಿ ಎತ್ತರದ ದಷ್ಟಪುಷ್ಟ ಮೈಕಟ್ಟು ಹೊಂದಿರುತ್ತಾರೆ. ಬೆಟ್ಟಗುಡ್ಡಗಳ ಹುಲ್ಲುಗಾವಲಿನಲ್ಲಿ, ಎದೆ ನಡುಗುವ ಕಗ್ಗತ್ತಲು ರಾತ್ರಿಯಲ್ಲಿ ಮೈಗೆಲ್ಲ ಬೂದಿ ಬಳಿದುಕೊಂಡು ಕೈಯಲ್ಲಿ ಎಕೆ-47 ಗನ್ ಹಿಡಿದು ಗೋವುಗಳ ರಕ್ಷಣೆ ಮಾಡುತ್ತಾರೆ.
ಗೋವುಗಳನ್ನು ಸಾಕುವುದು, ಅವುಗಳ ಸಂಪೂರ್ಣ ಪಾಲನೆ ಪೋಷಣೆ ಮಾಡುವುದು ಇವರ ಉದ್ಯೋಗ ಮತ್ತು ಜೀವನ. ಗೋಹತ್ಯೆಯನ್ನು ಮಹಾಪಾಪದ ಕೆಲಸವೆಂದು ಆಳವಾಗಿ ನಂಬಿದ್ದಾರೆ. ಮುಂದರಿ ಆದಿವಾಸಿಗಳ ಶ್ರೀಮಂತಿಕೆ ಅವರು ಸಾಕಿದ ಗೋವುಗಳ ಸಂಖ್ಯೆಯನ್ನೇ ಅವಲಂಬಿಸಿರುತ್ತದೆ.
ಗಂಡುಗಳು ಮದುವೆಯಾಗುವಾಗ ಹೆಣ್ಣಿನ ಕಡೆಯವರು ಕೇಳಿದಷ್ಟು ಗೋವುಗಳನ್ನು ದಕ್ಷಿಣೆ ರೂಪದಲ್ಲಿ ಕೊಡುವಂತಹ ಪರಿಪಾಠ ರೂಢಿಯಲ್ಲಿದೆ. ಮೈ ಚರ್ಮ ಕಿತ್ತು ಹೋಗುವಂತಹ ಆಫ್ರಿಕಾದ ಉರಿಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗೋವಿನ ಬೆರಣಿ ಸುಟ್ಟು ಅದರ ಬೂದಿಯನ್ನು ಮೈತುಂಬಾ ಬಳಿದುಕೊಳ್ಳುತ್ತಾರೆ. ನೋಡಲು ನಾಗಾಸಾಧುಗಳಂತೆ ಗೋಚರಿಸುತ್ತಾರೆ. ಗೋ ಭಸ್ಮವು ಸೋಂಕಿನಿ೦ದ ಮತ್ತು ಸೊಳ್ಳೆಗಳಿಂದ ರಕ್ಷಣೆ ನೀಡುತ್ತದೆ, ಆರೋಗ್ಯವಾಗಿರಲು ಗೋ ಮೂತ್ರ (cow urine) ಸೇವನೆ ಬಹಳ ಮುಖ್ಯ ಅನ್ನುವುದು ಇವರ ನಂಬಿಕೆ.
ಪ್ರತಿದಿನ ಗೋ ಮೂತ್ರದಿಂದ ಸ್ನಾನ ಮಾಡುತ್ತಾರೆ. ಆದ್ದರಿಂದಲೇ ಅವರ ತಲೆ ಕೊದಲು ಕಡುಗಪ್ಪು ಬಣ್ಣದ್ದಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಗೋ ಮೂತ್ರದಲ್ಲಿನ ಅಮೋನಿಯಾ. ಕಂದು ಬಣ್ಣದ ಕೊದಲು ಹೊಂದಿರುವುದು ಪವಿತ್ರತೆಯ ಸಂಕೇತ ಎನ್ನಲಾಗುತ್ತದೆ. ಗೋಮೂತ್ರ, ಗೋಮಯ ಮತ್ತು ಗೋವಿನ ಹಾಲನ್ನು ಇವರು ಅತೀ ಪವಿತ್ರ ಅಂತ ಭಾವಿಸುತ್ತಾರೆ.
ಗೋವುಗಳನ್ನು ಅಕ್ಷರಶಃ ಕಣ್ಣ ರಪ್ಪೆಗಳಂತೆ ಕಾಯುತ್ತಾರೆ. ಹುಲುಸಾದ ಮೇವು ನೀಡಿ ಕಟ್ಟುಮಸ್ತಾಗಿ ಬೆಳೆಸುತ್ತಾರೆ. ಸೊಳ್ಳೆಗಳು ಕಚ್ಚದಿರಲಿ, ರೋಗಗಳು ಬಾರದಿರಲಿ ಅಂತ ತಾವು ಮಾತ್ರವಲ್ಲದೇ ಗೋವುಗಳಿಗೂ ಪ್ರತಿರಾತ್ರಿ ಬೂದಿ ಇಲ್ಲವೇ ಮಣ್ಣನ್ನು ಮೈತುಂಬಾ ಬಳಿಯುತ್ತಾರೆ. ರಾತ್ರಿ ಬೆರಣಿಯ ಹೊಗೆ ಹಾಕಿ ರೋಗ ರುಜಿನಗಳಿಂದ ಗೋವುಗಳನ್ನು ಕಾಪಾಡುತ್ತಾರೆ.
ಹೀಗಾಗಿ ಇವರು ಪಾಲನೆ ಮಾಡಿದ ಗೋವುಗಳು ಬಲಿಷ್ಠವಾಗಿರುತ್ತವೆ. ಆರರಿಂದ ಏಳು ಅಡಿಗಳಷ್ಟು ಬಲಾಢ್ಯವಾಗಿ ಬೆಳೆದಿರುತ್ತವೆ. ವಿಶೇಷ ಸಂಗತಿ ಎಂದರೆ ಹಲವು ಭಾರತೀಯ ಗೋ ತಳಿಗಳು ಇವರಲ್ಲಿ ರಕ್ಷಣೆ ಪಡೆದಿವೆ. ನಾವು ‘ಮುಂದರಿ’ ಆದಿವಾಸಿಗಳಿಂದ ಕಲಿಯುವುದು ಸಾಕಷ್ಟಿದೆ.
ಇದನ್ನೂ ಓದಿ: Post office Saving Schemes :100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು