Atal Pension Yojana (APY) : ಆಧುನಿಕ ಬದುಕಿನಲ್ಲಿ ವೃದ್ಧಾಪ್ಯ ಎಂಬುವುದು ಇಳಿಗಾಲದ ನೆಮ್ಮದಿಯನ್ನೇ ನುಂಗಿ ಹಾಕುತ್ತಿದೆ. ಆರ್ಥಿಕ ಅಭದ್ರತೆಯ ಕಾರಣಕ್ಕೆ ಕುಟುಂಬದವರಿಗೇ ಬೇಡದ ಜೀವವಾಗುವ ಅಪಾಯ ಅಧಿಕವಾಗುತ್ತಿದೆ. ಹದಿವಯಸ್ಸಿನಲ್ಲಿಯೇ ಒಂದಷ್ಟು ಎಚ್ಚರಿಕೆಯಿಂದ ಯೋಚನೆ-ಯೋಜನೆ ಮಾಡಿದರೆ ಖಂಡಿತವಾಗಿಯೂ ವೃದ್ಧಾಪ್ಯವನ್ನು ಅತ್ಯಂತ ಸ್ವಾವಲಂಬಿಯಾಗಿ ಎದುರಿಸಬಹುದು.
ಇದಕ್ಕಾಗಿ ಹಲವು ಪಿಂಚಣಿ ಯೋಜನೆಗಳಿದ್ದು; ಇಂತಹ ಯೋಜನೆಗಳ ಪೈಕಿ ‘ಅಟಲ್ ಪೆನ್ಶನ್ ಯೋಜನೆ’ (Atal Pension Yojana-APY) ಕೂಡ ಒಂದಾಗಿದೆ. ಇದರಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತವಾಗಿದ್ದು; ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯುವ ಮೂಲಕ ಇಳಿಗಾಲದಲ್ಲಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ.
Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?
ಏನಿದು ಅಟಲ್ ಪೆನ್ಶನ್ ಯೋಜನೆ?
ಶಾರ್ಟಾಗಿ ಎಪಿವೈ ಎಂದು ಕರೆಯಲ್ಪಡುವ ಅಟಲ್ ಪೆನ್ಶನ್ ಯೋಜನೆಯು ಸಾಮಾಜಿಕ ಭದ್ರತಾ ಯೋಜನೆಯಾಗಿದೆ. 2015ರಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿರುವ ಈ ಯೋಜನೆಯನ್ನು ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (Pension Fund Regulatory and Development Authority-PFRDA) ಸಂಸ್ಥೆ ನಿರ್ವಹಿಸುತ್ತದೆ.
ಈ ಯೋಜನೆಯಡಿ ದೇಶಾದ್ಯಂತ ಫಲಾನುಭವಿಗಳ ಸಂಖ್ಯೆ 6 ಕೋಟಿ ದಾಟಿದೆ ಎಂಬ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವಾಲಯ ನೀಡುತ್ತದೆ. ದೇಶದ ಬಡಜನರು, ಅಸಂಘಟಿತ ವಲಯದವರಿಗೆ ಇಳಿಗಾಲದಲ್ಲಿ ಸ್ವಾವಲಂಬಿ ಜೀವನ ನಡೆಸಲು ಈ ಸ್ಕೀಮ್ ಅತ್ಯಂತ ಸಹಕಾರಿಯಾಗಿದೆ ಮತ್ತು ಅಷ್ಟೇ ಖಾತರಿಯಾಗಿದೆ.
Aadhaar Card Update : ಆಧಾರ್ ಅಪ್ಡೇಟ್ | ನಿಮ್ಮ ಮೊಬೈಲ್‌ನಲ್ಲೇ ಅಪ್ಡೇಟ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ…
ಈ ಯೋಜನೆಯಡಿ ಯಾರೆಲ್ಲ ಪಿಂಚಣಿ ಪಡೆಯಬಹುದು?
18ರಿಂದ 40 ವರ್ಷದೊಳಗಿನ ಭಾರತದ ಎಲ್ಲಾ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಅರ್ಹರು. ಆದರೆ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಒಳಪಡುವುದಿಲ್ಲ. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಬ್ಯಾಂಕ್ ಖಾತೆ ತೆರೆಯುವ ಮೂಲಕ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು.
ಆದಾಯ ಪ್ರಮಾಣ ಪತ್ರ, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಇತ್ಯಾದಿ ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ಗಳಲ್ಲಿ ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಂಡು ಅಗತ್ಯಕ್ಕೆ ತಕ್ಕ ಪ್ಲಾನ್ ಆಯ್ದುಕೊಂಡು ನಿಗದಿತ ಅವಧಿಗೆ ಹೂಡಿಕೆ ಮಾಡಬಹುದಾಗಿದೆ.
ಏನೆಲ್ಲ ಪ್ಲಾನ್’ಗಳಿವೆ?
ಪ್ರತಿ ತಿಂಗಳೂ ಒಂದು ಸಾವಿರ ರೂಪಾಯಿಂದ ಐದು ಸಾವಿರ ರೂಪಾಯಿ ವರೆಗೂ ಪಿಂಚಣಿ ಪಡೆಯುವ ವಿವಿಧ ಪ್ಲಾನ್ಗಳನ್ನು ಈ ಯೋಜನೆಯಲ್ಲಿವೆ. ಕ್ರಮವಾಗಿ 1,000, 2,000, 3,000, 4,000 ಹಾಗೂ 5,000 ರೂಪಾಯಿ ಪಡೆಯುವ ಆಯ್ಕೆ ಇದರಲ್ಲಿದ್ದು; ಆರಂಭದಲ್ಲೇ ನಿಮ್ಮ ಹಣಕಾಸು ಸ್ಥಿತಿಗೆ ಅನುಗುಣವಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕು.
ನೀವು ಆಯ್ಕೆ ಮಾಡಿಕೊಂಡ ಪ್ಲಾನ್ ಪ್ರಕಾರ ನಿಗದಿತ ಹಣ ಹೂಡಿಕೆ ಮಾಡುತ್ತ ಹೋದರೆ 60ನೇ ವಯಸ್ಸಿನ ನಂತರ ಮಾಸಿಕ ಪಿಂಚಣಿ ಶುರುವಾಗುತ್ತದೆ. 18ನೇ ವಯಸ್ಸಿನಲ್ಲಿ ಈ ಯೋಜನೆಯನ್ನು ಆರಂಭಿಸಿ, ಪ್ರತೀ ತಿಂಗಳು ಕೇವಲ 42 ರೂಪಾಯಿ ಕಟ್ಟುತ್ತಾ ಹೋದರೆ 1,000 ರೂಪಾಯಿ ಪಿಂಚಣಿ ಬರುತ್ತದೆ. ಅದೇ ರೀತಿ 18ನೇ ವಯಸ್ಸಿನಿಂದ ಪ್ರತೀ ತಿಂಗಳು ಕೇವಲ 210 ರೂಪಾಯಿ ಪಾವತಿಸುತ್ತಾ ಬಂದರೆ 60ರ ನಂತರ ಪ್ರತಿ ತಿಂಗಳು 5,000 ರೂಪಾಯಿ ಸಿಗುತ್ತದೆ.
Post office Saving Schemes :100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು
ಇನ್ನೂ 40ನೇ ವಯಸ್ಸಿಗೆ ಆರಂಭಿಸುವುದಾದರೆ…
ಈಗಾಗಲೇ ನೀವು 40ನೇ ವಯಸ್ಸಿಗೆ ಕಾಲಿಟ್ಟಿದ್ದರೆ, ಪ್ರತಿ ತಿಂಗಳು ಪಾವತಿಸಬೇಕಾದ ಮೊತ್ತ ಹಾಗೂ 60ರ ನಂತರ ಸಿಗಲಿರುವ ವಿವಿಧ ಹಂತದ ಮಾಸಿಕ ಪಿಂಚಣಿ ವಿವರ ಈ ಕೆಳಗಿನಂತಿದೆ:
- 1,000 ರೂಪಾಯಿ ಪಿಂಚಣಿ ಪಡೆಯಲು 291 ರೂಪಾಯಿ
- 2,000 ರೂಪಾಯಿ ಪಿಂಚಣಿ ಪಡೆಯಲು 582 ರೂಪಾಯಿ
- 3,000 ರೂಪಾಯಿ ಪಿಂಚಣಿ ಪಡೆಯಲು 873 ರೂಪಾಯಿ
- 4,000 ರೂಪಾಯಿ ಪಿಂಚಣಿ ಪಡೆಯಲು 1,164 ರೂಪಾಯಿ
ಪಾವತಿ ಹೇಗೆ?
ಅಟಲ್ ಪಿಂಚಣಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಹಣ ಕಟ್ಟಬೇಕು ಎಂಬ ನಿಯಮವೇನಿಲ್ಲ. ಪ್ರತಿ ತಿಂಗಳು ಆಗದಿದ್ದರೆ, ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಒಟ್ಟಿಗೇ ಪಾವತಿಸಲು ಕೂಡ ಅವಕಾಶವಿದೆ.
ಒಂದು ವೇಳೆ ನಿಗದಿತ ಹಣ ಕಟ್ಟುತ್ತ ಬಂದ ಫಲಾನುಭವಿಗಳು 60ನೇ ವಯಸ್ಸಿಗಿಂತ ಮೊದಲೇ ಮರಣ ಹೊಂದಿದರೆ ಅವರ ಸಂಗಾತಿಯು ಕೊನೆಯ ವರೆಗೆ ಹಣ ಪಡೆಯಲು ಅರ್ಹರಾಗುತ್ತಾರೆ. ಇಬ್ಬರೂ ಗತಿಸಿ ಹೋದರೆ ಪಿಂಚಣಿ ಹಣ ಅವರ ನಾಮಿನಿಗೆ ಸೇರುತ್ತದೆ.
1 thought on “ಈ ಯೋಜನೆಯಡಿ ವೃದ್ಧರಿಗೆ ಸಿಗಲಿದೆ ಪ್ರತಿ ತಿಂಗಳು ₹5000 | ಕೂಡಲೇ ನಿಮ್ಮ ಹೆಸರು ನೋಂದಾಯಿಸಿ Atal Pension Yojana (APY)”