Benefits of Sleep : ಸರಿಯಾಗಿ ನಿದ್ರೆ ಮಾಡದಿದ್ದರೆ ಏನಾಗುತ್ತೆ ಗೊತ್ತ? | ಮನುಷ್ಯನಿಗೆ ನಿದ್ದೆ ಎಷ್ಟು ಬೇಕು? ಎಷ್ಟು ಸಾಕು?

Share this Post

Benefits of Sleep : ವಿಜ್ಞಾನ ಎಷ್ಟೇ ಮುಂದುವರಿದರೂ ಇಂದಿಗೂ ನಿದ್ರೆಯ ಬಗ್ಗೆ ನಮ್ಮ ಅರಿವು ಅತ್ಯಲ್ಪ. `ನಿದ್ದೆ ಬರುವುದರಿಂದ ನಿದ್ದೆ ಮಾಡುತ್ತೇವೆ’ ಎಂದು ಕೊನೆಗೆ ಹೇಳುವವರೇ ಹೆಚ್ಚು. ಆದರೆ ನಿದ್ದೆಯು ಪ್ರತಿ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಒಬ್ಬ ವ್ಯಕ್ತಿಯ ದಿನ ಖುಷಿಯಾಗಿ ಶುರುವಾಗಬೇಕೆಂದರೆ ಆ ವ್ಯಕ್ತಿಗೆ ನಿದ್ದೆ ಸಂಪೂರ್ಣವಾಗಿರಬೇಕು. ನಮ್ಮಲ್ಲಿ ಹಲವರ ದಿನ ‘ಛೇ ನಿದ್ದೆನೇ ಸರಿಯಾಗಿ ಆಗಿಲ್ಲ’ ಅನ್ನೋ ಸಿಡಿಮಿಡಿಯಿಂದಲೇ ಪ್ರಾರಂಭವಾಗುತ್ತದೆ.

WhatsApp Group Join Now
Telegram Group Join Now

ನಿದ್ರೆ ಎಂದರೆ…

ನಿದ್ದೆ ಎಂದರೇ ಮನಸ್ಸು ಮತ್ತು ದೇಹವು ದಿನದ ಕಾರ್ಯಗಳಿಂದ ಅಂದರೆ ದೈಹಿಕ ಚಲನವಲನ, ಯೋಚನೆ ಮುಂತಾದವುಗಳಿ೦ದ ನಿವೃತ್ತಿ ಪಡೆದು, ಮುಂದಿನ ದಿನದ ಕಾರ್ಯಗಳಿಗೆ ತಮ್ಮನ್ನು ತಾವು ತಯಾರು ಮಾಡಿಕೊಳ್ಳುವ ಕ್ರಿಯೆ. ಈ ಕ್ರಿಯೆ ನಿಯಮಿತವಾಗಿ ನಡೆಯದಿದ್ದರೆ ಮನುಷ್ಯ ಮನುಷ್ಯನಾಗಿಯೇ ಇರುವುದಿಲ್ಲ.

ಚಿಂತೆ, ದುಗುಡ, ಒತ್ತಡದಿಂದಾಗಿ ಕೆಲವರಿಗೆ ನಿದ್ರಾಹೀನತೆಯ ಸಮಸ್ಯೆ ಅನುಭವಿಸಿದರೆ, ಮತ್ತೆ ಕೆಲವರಿಗೆ ಕೆಲಸದ ಬ್ಯೂಸಿ, ಅಧಿಕ ಚಟುವಟಿಕೆಯಿಂದಾಗಿ ಸರಿಯಾಗಿ ನಿದ್ರೆ ಮಾಡಲಾಗದ ದುಃಸ್ಥಿತಿ. ಹೀಗಾಗಿ ಇಂದು ನಿದ್ರಾತಜ್ಞರು, ಚಿಕಿತ್ಸಕರಿಗೆ ಎಲ್ಲಿಲ್ಲದ ಬೇಡಿಕೆ.

ಇದನ್ನೂ ಓದಿ: Free Horticulture training 2024 : ಸಂಬಳದ ಸಹಿತ ಉಚಿತ ತೋಟಗಾರಿಕೆ ತರಬೇತಿ | ರೈತ ಮಕ್ಕಳೇ ಇದರ ಪ್ರಯೋಜನ ಪಡೆಯಿರಿ

ನಿದ್ದೆ ಮಾಡಿಸುವ ಆ್ಯಪ್‌ಗಳು

ನಿದ್ದೆ ಮಾಡಿಸಲೆಂದೇ ಸಾವಿರಾರು ಆ್ಯಪ್‌ಗಳು ತಲೆ ಎತ್ತಿಕೊಂಡಿವೆ. ನಿದ್ರೆ ಅಳೆಯಲು ಕೈಗಡಿಯಾರ, ದಿಂಬಿನಡಿ ಇಡುವ ತಾಂತ್ರಿಕ ಸಾಧನಗಳು ಹತ್ತು ಹಲವು. ಇದು ಬರಿಯ ಊಹಾಪೋಹಗಳಿರಬಹುದೆಂದು ಸುತ್ತಮುತ್ತ ವಿಚಾರಿಸಿದರೆ, ಇವುಗಳನ್ನು ಬಳಸುವವರು ಕಡಿಮೆಯೇನಿಲ್ಲ.

ಅಮೆರಿಕಾದಲ್ಲಿ ಶೇ.35ರಷ್ಟು ಜನರಿಗೆ ನಿದ್ರೆಯ ಸಮಸ್ಯೆ ಇದೆ ಎನ್ನುತ್ತದೆ, ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಡ್ರೋಲ್ ಅಂಡ್ ಪ್ರಿವೆನ್ಷನ್. ನಿದ್ರೆಯ ಕಾರಣಕ್ಕೇ ಹತ್ತು ಲಕ್ಷ ಕೋಟಿ ಡಾಲರ್‌ಗಳಷ್ಟು ಅಮೆರಿಕಾಕ್ಕೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ. ಈ ಸಮಸ್ಯೆ ಕೇವಲ ಅಮೆರಿಕಕ್ಕಷ್ಟೆ ಸಂಬ೦ಧಿಸಿದ್ದಲ್ಲ, ಇಡೀ ಜಗತ್ತಿನ ಎಲ್ಲೆಡೆ ಕಾಡುವ ವಿಷಯವಾಗಿದೆ.

ಇದನ್ನೂ ಓದಿ: Karnataka government recruitment 2024 : ರಾಜ್ಯದಲ್ಲಿ ಖಾಲಿಯಿವೆ 2.5 ಲಕ್ಷಕ್ಕೂ ಹೆಚ್ಚು ಸರಕಾರಿ ಹುದ್ದೆಗಳು | 30,000 ಹುದ್ದೆಗಳ ನೇಮಕಾತಿಗೆ ಸರಕಾರದ ಕ್ರಮ 

ನಿದ್ರಾಭಂಗದಿಂದ ಸಾವು!

ಒಬ್ಬ ಝೆನ್‌ಗುರುವು `ಜ್ಞಾನೋದಯವೆಂದರೆ ಬಾಯಾರಿಕೆಯಾದಾಗ ನೀರು ಕುಡಿಯುವುದು, ಹಸಿವಾದಾಗ ಊಟ ಮಾಡುವುದು, ನಿದ್ರೆ ಬಂದಾಗ ಮಲಗುವುದು’ ಎನ್ನುತ್ತಾನೆ. ಭಗವದ್ಗೀತೆಯು ಸಹ ಯೋಗವೆಂದರೆ ನಿದ್ರೆ ಮತ್ತು ಎಚ್ಚರಗಳ ಸಾಮರಸ್ಯ ಎನ್ನುತ್ತದೆ. ಸರಿಯಾಗಿ ನಿದ್ರೆ ಮಾಡುವಂತಾದರೆ, ಭ್ರಾಂತಿರೋಗವನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎನ್ನುತ್ತದೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ.

ಹೌದು, ಇತ್ತೀಚಿನ ವರ್ಷಗಳಲ್ಲಿ ಸರಿಯಾಗಿ ನಿದ್ರೆಯಿಲ್ಲದೆ ಅನೇಕರು ವಿವಿಧ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವುಗಳ ಪಟ್ಟಿಯಲ್ಲಿ ಅಲ್ಜೈಮರ್ಸ್, ಡಿಮೇನ್ಸಿಯಾ ಕೂಡ ಸೇರಿವೆ. 15 ದಿನಗಳಷ್ಟು ಸಮಯ ನಿದ್ರಾಭಂಗವಾದ ಇಲಿಗಳು ಸಾಯುತ್ತವೆ ಎನ್ನುವುದು ಪ್ರಯೋಗಗಳಿಂದ ತಿಳಿದು ಬಂದಿದೆ. ನಿದ್ರಾಭಂಗವಾದ ಇಲಿಗಳು ಅತ್ಮಹತ್ಯೆ ಮಾಡಿಕೊಂಡಿರುವುದು ಇನ್ನೊಂದು ಪ್ರಯೋಗದಲ್ಲಿ ವರದಿಯಾಗಿದೆ.

ಇದಕ್ಕೆ ಮಾನವನು ಹೊರತಾಗಿಲ್ಲ. ನಿದ್ರಾಭಂಗದಿಂದ ಪ್ರಪಂಚದಲ್ಲಿ ಆಗಿರುವ ಅನಾಹುತಗಳ ಪಟ್ಟಿಗೆ ಭೋಪಾಲ್ ಅನಿಲ ದುರಂತ, ಚರ್ನೊಬೈಲ್ ಅಣುಸ್ಥಾವರ ದುರಂತ, ಎಕ್ಸಾನ್ ಕಚ್ಚಾ ತೈಲ ದುರಂತ, ಅನೇಕ ವಿಮಾನ ದುರಂತ ಮತ್ತು ಕೈಗಾರಿಕ ಅನಾಹುತಗಳು ಜೊತೆಗೆ ನಿತ್ಯ ಕಾಣುತ್ತಿರುವ ಅಪಘಾತಗಳು ಸೇರಿವೆ.

ಇದನ್ನೂ ಓದಿ: Water is medicine – How much water is good for health? ನೀರೆಂಬ ದಿವ್ಯ ಔಷಧಿ | ಎಷ್ಟು ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ?

ಎಷ್ಟು ನಿದ್ದೆ ಉತ್ತಮ?

ಪ್ರತಿ ವ್ಯಕ್ತಿಯೂ ಸರಾಸರಿ ಒಂದನೇ ಮೂರು ಭಾಗದ ಆಯುಷ್ಯವನ್ನು ನಿದ್ದೆಯಲ್ಲಿಯೇ ಕಳೆಯುತ್ತಾನೆ. ನಾವು ನೂರು ವರ್ಷ ಬದುಕಿದರೆ ಅದರಲ್ಲಿ 36 ವರ್ಷಗಳು ನಿದ್ರೆಯಲ್ಲಿ ಕಳೆದಿರುತ್ತದೆ. `ನ್ಯು ಸೈನ್ಟಿಸ್ಟ್’ ವರದಿ ಯಾರಿಗೆ ಎಷ್ಟು ನಿದ್ರೆ ಅವಶ್ಯಕ ಎಂಬುವುದನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ.

  • ಒಂದು ವರ್ಷದಿಂದ ಮೂರು ವರ್ಷದ ಮಗುವಿಗೆ 11 ರಿಂದ 14 ಗಂಟೆ
  • ನಾಲ್ಕು ವರ್ಷದಿಂದ 12 ವರ್ಷದವರಿಗೆ 9 ರಿಂದ 11 ಗಂಟೆ
  • ಹದಿಹರೆಯದವರಿಗೆ ಅಂದರೆ ವಯಸ್ಕರಿಗೆ ದಿನಕ್ಕೆ ಸುಮಾರು ಏಳು ಗಂಟೆ
  • ಅದನ್ನು ಮೇಲ್ಪಟ್ಟವರಿಗೆ 7 ರಿಂದ 9 ಗಂಟೆಗಳ ನಿದ್ದೆಯ ಅವಶ್ಯಕತೆ ಇದೆ.

ನಿದ್ರೆಯಿಂದ ಆಗುವ ಲಾಭಗಳೇನು?

ಸಮರ್ಪಕವಾಗಿ ನಿದ್ದೆ ಮಾಡುವುದರಿಂದ ಆಗುವ ಲಾಭಗಳು ಒಂದೆರಡಲ್ಲ. ನಿದ್ರೆಯಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜ್ಞಾಪಕಶಕ್ತಿ ತೀವ್ರವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮನಸ್ಸು ಸಂತೋಷದಿAದಿರುತ್ತದೆ. ದೇಹವು ಚಟುವಟಿಕೆಯಿಂದ ಕೂಡಿರುತ್ತದೆ. ನಿದ್ರೆಯಿಂದ ಶ್ರಮ, ಆಯಾಸ ನಿವಾರಣೆಯಾಗುತ್ತದೆ.

ಸರಿಯಾದ ನಿದ್ದೆಯೂ ಚಯಾಪಚಯವನ್ನು ಜಾಸ್ತಿ ಮಾಡಿ ದೇಹಕ್ಕೆ ಮತ್ತು ಮನಸ್ಸಿಗೆ ಪುಷ್ಟಿಯನ್ನು ಕೊಡುತ್ತದೆ. ಮೆದುಳಿನಲ್ಲಿ ಉಂಟಾಗುವ ಕಲ್ಮಶಗಳನ್ನು ಹೊರಹಾಕುವ ಕೆಲಸ ನಿದ್ರೆಯ ಸಮಯದಲ್ಲಿ ನಡೆಯುತ್ತದೆ. ಆದರೆ ಎಚ್ಚರವಿರಲಿ, ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತ ನಿಗದಿತ ಅವಧಿಗಿಂತ ಹೆಚ್ಚು ನಿದ್ರಿಸಿದಲ್ಲಿ ದೇಹದಲ್ಲಿ ಆಲಸ್ಯ, ಮೈಕೈ ನೋವು, ನಿರಾಸಕ್ತಿ, ಸುಸ್ತು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: Caste and Income certificate : ನಿಮ್ಮ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ ಪಡೆಯಿರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಸಮೃದ್ಧ ನಿದ್ರೆಗೆ ಹೀಗೆ ಮಾಡಿ…

ಈಗೀಗ ನಿದ್ರಾ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ನಿದ್ರಾ ಉದ್ಯಮವೂ ಬೆಳೆಯುತ್ತಿದೆ. ಈ ಕೆಳಗಿನ ಕ್ರಮ ಅನುಸರಿಸುವ ಮೂಲಕ ನಿದ್ರಾಭಂಗಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

  • ಸಾಮಾನ್ಯ ನಿದ್ರಾ ಸಮಸ್ಯೆ ಕಾಡುತ್ತಿದ್ದಲ್ಲಿ ಪಾದ ಹಾಗೂ ತಲೆಯ ಭಾಗಕ್ಕೆ ಅಭ್ಯಂಜನ ಮಾಡಿಕೊಳ್ಳುವುದು
  • ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು
  • ಮಲಗುವ ಮೊದಲು ಹಾಲಿಗೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಸೇವಿಸುವುದು
  • ಮನಸ್ಸಿಗೆ ಆಸಕ್ತಿ ಇರುವಂತಹ ವಿಚಾರದ ಬಗ್ಗೆ ಓದುವುದು
  • ಚಿಂತನೆ ಮಾಡುವುದು, ಲಘು ಸಂಗೀತವನ್ನು ಕೇಳುವುದು, ಸ್ವಲ್ಪ ಹೊತ್ತು ಧ್ಯಾನ ಮಾಡುವುದು
  • ಎರಡು ಕಣ್ಣುಗಳಿಗೆ ಗುಲಾಬಿ ಜಲ ಅಥವಾ ಹಾಲಿನಿಂದ ಮಸಾಜ್ ಮಾಡಿಕೊಳ್ಳುವುದು

…ಹೀಗೆ ವಿವಿಧ ಕ್ರಮಗಳಿಂದ ನಿದ್ರಾಭಂಗವನ್ನು ನಿವಾರಿಸಿಕೊಳ್ಳಬಹುದು. ಆದರೆ ಈ ಕ್ರಮಗಳಿಗೂ ಉಪಶಮನವಾಗದಿದ್ದರೆ ವೈದ್ಯರ ಸಲಹೆ ಮೇರೆಗೆ ಮುನ್ನಡೆಯುವುದು ಕ್ಷೇಮಕರ.

ಇದನ್ನೂ ಓದಿ: Farmer Scientist : ಹೀಗೊಬ್ಬ ವಿಶೇಷ ರೈತ ವಿಜ್ಞಾನಿ : ಕಡಿಮೆ ಖರ್ಚಿನಲ್ಲಿ ಅಪರೂಪದ ಕೃಷಿ ಯಂತ್ರೋಪಕರಣ ತಯಾರಿಕೆ


Share this Post
WhatsApp Group Join Now
Telegram Group Join Now
error: Content is protected !!