Doorstep delivery of mangoes ಮನೆ ಬಾಗಿಲಿಗೇ ಮಾವು ಸರಬರಾಜು

Share this Post

Doorstep delivery of mangoes : ಮತ್ತೆ ಮಾವಿನ ಸೀಸನ್ ಶುರುವಾಗಿದೆ. ವಿವಿಧ ತಳಿಯ ಮಾವಿನ ಹಣ್ಣುಗಳು (Mango Fruits)ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ. ಬರಗಾಲದಿಂದ ಕಂಗೆಟ್ಟಿರುವ ರೈತರು ಗ್ರಾಹಕರ ಮನೆಗೇ ಮಾವು ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ರೈತರ ಜೊತೆಗೆ ಅಂಚೆ ಇಲಾಖೆ ಕೈ ಜೋಡಿಸಿದ್ದು; ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಮಾವಿನಹಣ್ಣು ತರಿಸಿಕೊಳ್ಳಬಹುದಾಗಿದೆ. ಮಾವಿಗೆ ಹೊಸ ಮಾರುಕಟ್ಟೆ ಕಲ್ಪಿಸಲು ಮಾವು ಬೆಳೆಗಾರರು ಮುಂದಾಗಿದ್ದು; ಆನ್‌ಲೈನ್ ಮಾರಾಟ ಜೋರಾಗಿ ನಡೆಯುತ್ತಿದೆ.

WhatsApp Group Join Now
Telegram Group Join Now

ಅಸಲಿ ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳು. ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಮಾವಿನ ತಳಿಗಳಲ್ಲಿ ಬಾದಾಮಿ (40%), ತೋತಾಪುರಿ (20%), ಬಂಗನ್‌ಪಲ್ಲಿ (10%) ನೀಲಂ (10%), ರಸಪುರಿ (5%) ಮಲ್ಲಿಕಾ (2%) ಮುಖ್ಯವಾದವು. ಶೇ.13ರಷ್ಟು ಇತರ ತಳಿಗಳನ್ನು ಬೆಳೆಯಲಾಗುತ್ತದೆ. ಸುಮಾರು 60 ಸಾವಿರ ರೈತರು ಮಾವಿನ ಕೃಷಿಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Post office Saving Schemes :100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು

ಮಾವಿನ  ಆನ್‌ಲೈನ್ ಮಾರುಕಟ್ಟೆ Mango online market

ಕೋಲಾರ, ಧಾರವಾಡ, ಬೆಳಗಾವಿ ಜಿಲ್ಲೆಗಳ ರೈತರು ಮಾವಿನ ಬೇಸಾಯದಲ್ಲಿ ಅಧಿಕ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇವರಿಗೆ ಮಾವು ನಲಿವಿಗಿಂತ ನೋವನ್ನೇ ಹೆಚ್ಚು ಉಣಿಬಡಿಸುತ್ತಿರುವುದು ಶೋಚನೀಯ. ಅತಿವೃಷ್ಟಿ, ಅನಾವೃಷ್ಟಿ, ಕೀಟ ರೋಗ ಬಾಧೆ, ಹವಾಮಾನ ವೈಪರೀತ್ಯ, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಒಂದಿಲ್ಲೊ೦ದು ಸಂಕಷ್ಟವನ್ನು ಪ್ರತಿ ವರ್ಷವೂ ಮಾವು ಬೆಳೆಗಾರರು ಎದುರಿಸುವಂತಾಗಿದೆ.

ಈ ಪೈಕಿ ಮಾರುಕಟ್ಟೆ ಸಮಸ್ಯೆಗೆ ಮಾವು ಬೆಳೆಗಾರರು ಅಂಚೆ ಇಲಾಖೆಯ ಸಹಕಾರದೊಂದಿಗೆ ವಿಶಿಷ್ಟ ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ರಸಭರಿತ ಮಾವಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಪೂರೈಸುವ ವ್ಯವಸ್ಥೆಯನ್ನು ಅಂಚೆ ಇಲಾಖೆ ಪ್ರಾರಂಭಿಸಿದೆ. ಮಾವು ಅಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಅಂಚೆ ಇಲಾಖೆ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ಮಾವು ಸರಬರಾಜು ಮಾಡುತ್ತಾರೆ.

ಇದನ್ನೂ ಓದಿ: PM Surya Ghar Scheme : ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಉಚಿತ ಸೋಲಾರ್ ವಿದ್ಯುತ್ ಪಡೆಯುವುದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಕೊರೋನಾ ಕಲಿಸಿದ ಪಾಠ

ಅಂದಹಾಗೇ ಸದರಿ ಆಲ್‌ಲೈನ್ ಮಾರಾಟ ವ್ಯವಸ್ಥೆ ಆರಂಭವಾಗಿದ್ದು; ಕೊರೋನಾ (2019) ಸಮಯದಲ್ಲಿ. ಆಗ ಮಾವಿನ ಹಂಗಾಮ ಅಡಿಯಿಡುವ ಹೊತ್ತಿಗೆ ಸರಿಯಾಗಿ ಕೊರೋನಾ ಸೋಂಕು ಆರಂಭವಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಮಾವಿಗೆ ಮಾರುಕಟ್ಟೆ ಕೊರತೆ ಎದುರಾಗಿತ್ತು. ಇದ್ದ ಬೆಳೆಯನ್ನೇ ಸಾಗಿಸಲಾಗದೇ, ಮಾರುಕಟ್ಟೆಗೆ ಒಯ್ಯಲಾಗದೇ ರೈತರು ಕಂಬನಿ ಸುರಿಸುವಂತಾಗಿತ್ತು. ಆಗ ರೈತರಿಗೆ ಹೊಳೆದಿದ್ದೇ ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸುವ ಐಡಿಯಾ.

ಇಲ್ಲಿಯ ವರೆಗೆ ಇಲಾಖೆಯು ಒಟ್ಟು 3.15 ಲಕ್ಷ ಕೆಜಿ ತೂಕದ 92,265 ಮಾವಿನ ಹಣ್ಣುಗಳ ಪಾರ್ಸೆಲ್‌ಗಳನ್ನು ತಲುಪಿಸಿದೆ. ಇದರಿಂದ ಬರೋಬ್ಬರಿ 74,59,265 ರೂಪಾಯಿ ಆದಾಯವನ್ನು ಗಳಿಸಿದೆ. ರೈತರು ತಾವು ಬೆಳೆದ ಮಾವಿನ ಹಣ್ಣನ್ನು ಮೂರು ಕೇಜಿ ಬಾಕ್ಸ್’ಗಳಲ್ಲಿ ಪ್ಯಾಕ್ ಮಾಡಿ ಅಂಚೆ ಕಚೇರಿಗೆ ಒದಗಿಸುತ್ತಾರೆ. ಬೆಂಗಳೂರಿನ ಜಿಪಿಒ ಗೆ (ಜನರಲ್ ಪೋಸ್ಟ್ ಆಫೀಸ್) ರೈತರು ತರುವ ಬಾಕ್ಸ್’ಗಳನ್ನು ವ್ಯಾಪಾರದ ಪಾರ್ಸೆಲ್‌ಗಳಾಗಿ ಕಾಯ್ದಿರಿಸಲಾಗುತ್ತದೆ. ಅದೇ ದಿನ ಅಥವಾ ಮರುದಿನ ಪೋಸ್ಟ್ಮ್ಯಾನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹಣ್ಣಿನ ಬಾಕ್ಸ್ಗಳನ್ನು ತಲುಪಿಸಲಾಗುತ್ತದೆ.

ಮಾವು ಆರ್ಡರ್ ಮಾಡುವುದು ಹೇಗೆ?

ನೈಸರ್ಗಿಕವಾಗಿ ಮಾಗಿಸಿದ ಬಾದಾಮಿ, ರಸಪೂರಿ, ಆಲ್ಫೋನ್ಸಾ ತಳಿಯ ಮಾವ ಲಭ್ಯವಿದ್ದು; ಆರ್ಡರ್ ಬುಕ್ ಮಾಡಲು ಕನಿಷ್ಠ ಒಂದು ಬಾಕ್ಸ್ ಅಂದರೆ, 3 ಕೆ.ಜಿ ಮಾವು ಖರೀದಿಸಬೇಕಾಗುತ್ತದೆ. ಮಹಾನಗರದ ಯಾವುದೇ ಭಾಗದ ಗ್ರಾಹಕರು ಆನ್‌ಲೈನ್ ಮೂಲಕ ಮಾವು ಆರ್ಡರ್ ಮಾಡಿ, ಮನೆ ಬಾಗಿಲಿಗೇ ತರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?


Share this Post
WhatsApp Group Join Now
Telegram Group Join Now
error: Content is protected !!