Incentive for the simple Marriage : ಮದುವೆ ಎಂಬುವುದು ಇಂದು ಹಲವರಿಗೆ ಅತೀ ಆಡಂಬರದ, ಪ್ರತಿಷ್ಠೆಯ ಸಂಕೇತವಾಗಿದೆ. ಮದುವೆಗಾಗಿ ಖರ್ಚು ಮಾಡುವುದರಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದ್ದು; ಬಡವರು ಮತ್ತು ಮಧ್ಯಮ ವರ್ಗದವರು ಮದುವೆ ಖರ್ಚಿಗೆ ಸಾಲ ಮಾಡುವ ಪರಿಸ್ಥಿತಿ ಬಂದಿದೆ. ಮದುವೆಗಾಗಿ ಮಾಡಿದ ಸಾಲ ತೀರಿಸಲು ಮುಂದೆ ಅರ್ಧ ಜೀವನವನ್ನೇ ಸವೆಸಬೇಕಾದ ದುಃಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಹಿನ್ನಲೆಯಲ್ಲಿ ಸರಳ ಮದುವೆ, ಸಾಮೂಹಿಕ ಮದುವೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಿಂಪಲ್ಲಾಗಿ ಮದುವೆ ಆಗಬಯಸುವ ನವಜೋಡಿಗಳಿಗೆ 50,000 ರೂಪಾಯಿ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿದೆ. ಸರಳ ಮದುವೆ ಪ್ರೋತ್ಸಾಹಧನಕ್ಕೆ ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಈಗಾಗಲೇ ರಾಜ್ಯ ಸರಕಾರ ‘ಮಾಂಗಲ್ಯ ಭಾಗ್ಯ’ ಹೆಸರಿನಲ್ಲಿ ಸರಳ ಸಾಮೂಹಿಕ ವಿವಾಹ ಯೋಜನೆ ನಡೆಸುತ್ತಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಒಟ್ಟು 34,563 ದೇವಾಲಯಗಳಿವೆ. ಇವುಗಳ ಪೈಕಿ ‘ಎ’ ಹಾಗೂ ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ.
ವಿವಾಹವಾಗುವ ಜೋಡಿಗಳಿಗೆ ಒಟ್ಟು 60,000 ರೂಪಾಯಿ ಉಚಿತ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಈ ಮದುವೆಗೆ ಬರುವ ವಧು-ವರರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ವೆಚ್ಚವನ್ನು ಆಯಾ ದೇವಸ್ಥಾನದ ನಿಧಿಯಿಂದಲೇ ಭರಿಸಲಾಗುತ್ತದೆ.
ಇತರ ವಿವಾಹ ಯೋಜನೆಗಳು
ಎಲ್ಲ ವರ್ಗದ ಯುವ ಜೋಡಿಗಳಿಗೂ ಅನ್ವಯಿಸುವ ‘ಮಾಂಗಲ್ಯ ಭಾಗ್ಯ’ ಯೋಜನೆಯ ಜೊತೆಗೆ ವಿವಿಧ ವರ್ಗಗಳಿಗೆ ಸೀಮಿತವಾಗಿಯೂ ಕೂಡಿ ಹಲವು ವಿವಾಹ ಯೋಜನೆಗಳನ್ನು ಕೂಡ ರಾಜ್ಯ ಸರಕಾರ ಆಯೋಜಿಸಿದೆ. ಅಂತಹ ಕೆಲವು ವಿವಾಹ ಯೋಜನೆಗಳ ಈ ಕೆಳಕಂಡAತಿವೆ:
- ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ
- ಪರಿಶಿಷ್ಟ ಜಾತಿ ವಿಧವಾ/ ಮರು ವಿವಾಹ ಪ್ರೋತ್ಸಾಹಧನ ಯೋಜನೆ
- ಪರಿಶಿಷ್ಟ ಜಾತಿ ಸಮುದಾಯದ ಒಳಗೆ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ
- ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನ ಯೋಜನೆ
- ಪರಿಶಿಷ್ಟ ಜಾತಿ ಸರಳ ವಿವಾಹ ಪ್ರೋತ್ಸಾಹ ಯೋಜನೆ
ಸರಳ ವಿವಾಹಕ್ಕೆ 50,000 ಪ್ರೋತ್ಸಾಹಧನ
ಮೇಲ್ಕಾಣಿಸಿದ ವಿವಿಧ ವಿವಾಹ ಪ್ರೋತ್ಸಾಹಧನ ಯೋಜನೆಗಳ ಪೈಕಿ ಸರಕಾರ ವಿಶೇಷವಾಗಿ ‘ಸರಳ ವಿವಾಹ’ವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 50,000 ರೂಪಾಯಿ ಸಹಾಯಧನ ಒದಗಿಸುತ್ತಿದೆ. ನೋಂದಾಯಿತ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ದಂಪತಿಗಳಿಗೆ ‘ಸರಳ ವಿವಾಹ ಪ್ರೋತ್ಸಾಹಧನ’ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ.
ಸರಳವಾಗಿ ವಿವಾಹವಾದ ದಂಪತಿಗಳಿಗೆ 50,000 ರೂಪಾಯಿ ಪ್ರೋತ್ಸಾಹಧನ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಯೋಜಕರುಗಳಿಗೆ ಪ್ರೋತ್ಸಾಹಧನ ಹಾಗೂ ವಿವಾಹದ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 2,000 ರೂಪಾಯಿಗಳನ್ನು ನೀಡಲಾಗುವುದು. ಪರಿಶಿಷ್ಟ ಜಾತಿಯ ಜೋಡಿಗಳು ಈ ಪ್ರೋತ್ಸಾಹಧನ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ದಂಪತಿಗಳು ಸರಳ ವಿವಾಹವಾದ ಒಂದು ವರ್ಷದೊಳಗೆ ಸೂಕ್ತ ದಾಖಲಾತಿಗಳನ್ನು ಅರ್ಜಿಯೊಂದಿಗೆ ನಮೂದಿಸುವ ಮೂಲಕ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಕೆ ಸಚ್ಚಿತ್ರ ಕೈಪಿಡಿ ಓದಲು ಇಲ್ಲಿ ಕ್ಲಿಕ್ ಮಾಡಿ