KPSC recruitment 2024 : KPSC ನೇಮಕಾತಿ ಪರ್ವ | 10 ಇಲಾಖೆಗಳ ಸರಕಾರಿ ಹುದ್ದೆಗೆ ಅರ್ಜಿ ಆಹ್ವಾನ

Share this Post

KPSC recruitment 2024 : ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission-KPSC) ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಈಗಾಗಲೇ ಸುಮಾರು 10 ಇಲಾಖೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು; ಇಲಾಖಾವಾರು ಹುದ್ದೆಗಳ ಸಂಖ್ಯೆ, ಅರ್ಜಿ ಸಲ್ಲಿಕೆ ವಿಧಾನ, ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಕುರಿತ ಸಂಕ್ಷಿಪ್ತ ವಿವರ ಈ ಲೇಖನದಲ್ಲಿದೆ…

WhatsApp Group Join Now
Telegram Group Join Now

KPSC ಹೊರಡಿಸಿದ ಅಧಿಸೂಚನೆಗಳ ವಿವರ

ರಾಜ್ಯ ಸರಕಾರದ ಹತ್ತು ಇಲಾಖೆಗಳ ಸಾವಿರಾರು ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿಕೃತ ಅಧಿಸೂಚನೆ (Official notification) ಹೊರಡಿಸಿದೆ. ಏಪ್ರಿಲ್-ಮೇ ತಿಂಗಳು ಈ ಎಲ್ಲ ಹುದ್ದೆಗಳ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ. ಇಲಾಖಾವಾರು ವಿವರ ಈ ಕೆಳಗಿನಂತಿದೆ:

  • ಭೂಮಾಪಕರ ಹುದ್ದೆಗಳ ನೇಮಕಾತಿ
  • ಸಾರಿಗೆ ಇಲಾಖೆಯ ನೇಮಕಾತಿ
  • ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ
  • ಗ್ರೂಪ್ ಸಿ ಹುದ್ದೆಗಳ ನೇಮಕಾತಿ
  • ಲೆಕ್ಕಪತ್ರ ಇಲಾಖೆ ಹುದ್ದೆಗಳ ನೇಮಕಾತಿ
  • ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ
  • ಗ್ರೂಪ್ ಬಿ ಹುದ್ದೆಗಳ ನೇಮಕಾತಿ
  • ಹೊಮಿಯೋಪತಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕರು ಹುದ್ದೆಗಳ ನೇಮಕಾತಿ
  • ಪದವಿ ಮುಗಿಸಿದವರಿಗೆ ಗ್ರೂಪ್ ಸಿ ಹುದ್ದೆಗಳ ನೇಮಕಾತಿ
  • ಡಿಪ್ಲೋಮ ಹಾಗೂ ಪದವಿ ಅಭ್ಯರ್ಥಿಗಳಿಗೆ ಗ್ರೂಪ್ ಸಿ ಹುದ್ದೆಗಳು
1. ಭೂಮಾಪಕರ ಹುದ್ದೆಗಳ ನೇಮಕಾತಿ

ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 364 ಭೂಮಾಪಕರ (Land Surveyor) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕನಿಷ್ಠ ವಿದ್ಯಾರ್ಹತೆಯು – ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿವಾಗುವ ದಿನಾಂಕ 11ನೇ ಮಾರ್ಚ್ 2024 ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10ನೇ ಏಪ್ರಿಲ್ 2024.

KPSC Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

2. ಸಾರಿಗೆ ಇಲಾಖೆಯ ನೇಮಕಾತಿ

ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ (Motor Vehicle Inspector) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಪ್ರಕಟಿಸಿದೆ. ಒಟ್ಟು 76 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಟೋಮೊಬೈಲ್ ವಿಷಯದಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿ೦ಗ್ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 22 ರಿಂದ ಮೇ 21ರ ವರೆಗೆ ಅವಕಾಶ ನೀಡಲಾಗಿದೆ.

3. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ

ಏಳು ವರ್ಷಗಳ ನಂತರ ಪಿಡಿಒ ಅರ್ಥಾತ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ (Panchayat Development Officer-PDO) ಹುದ್ದೆಗಳ ನೇಮಕಾತಿಗೆ ಇದೀಗ ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕಲ್ಯಾಣ ಕರ್ನಾಟಕ ಸೇರಿ ಒಟ್ಟು 247 PDO ಹುದ್ದೆಗಳ ನೇಮಕಾತಿ ನಡೆಯಲಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 15, 2024 ರಿಂದ ಮೇ 15, 2024ರ ವರೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

4. ಗ್ರೂಪ್ ಸಿ ಹುದ್ದೆಗಳ ನೇಮಕಾತಿ

ಜಲ ಸಂಪನ್ಮೂಲ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 400ಕ್ಕೂ ಅಧಿಕ ಗ್ರೂಪ್ ‘ಸಿ’ ಹುದ್ದೆಗಳ (Group C posts) ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಪ್ರತ್ಯೇಕ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಏಪ್ರಿಲ್ 29, 2024 ರಿಂದ ಮೇ 28, 2024ರ ವರೆಗೆ ಅವಕಾಶ ನೀಡಲಾಗಿದೆ.

Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?

5. ಲೆಕ್ಕಪತ್ರ ಇಲಾಖೆ ಹುದ್ದೆಗಳ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗವು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವಂತಹ ಸಹಾಯಕ ನಿಯಂತ್ರಕರು (Group A) 43 ಹುದ್ದೆಗಳು ಹಾಗೂ ಲೆಕ್ಕಪರಿಶೋಧನಾ ಅಧಿಕಾರಿ (Group A) 54 ಸೇರಿ ಒಟ್ಟು 97 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮಾರ್ಚ್ 18 2024 ರಿಂದ ಏಪ್ರಿಲ್ 17 2024ರ ವರೆಗೆ ಅವಕಾಶ ನೀಡಲಾಗಿದೆ.

6. ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವಂತ 384 ಗೆಜೆಟೆಡ್ ಪ್ರೊಬೇಷನರ್ (Gazetted Probationer) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಯಾವುದಾದರೂ ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹುದ್ದೆಗಳಿಗೆ ಏಪ್ರಿಲ್ 4, 2024 ರಿಂದ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

7. ಗ್ರೂಪ್ ಬಿ ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವಂತಹ 327 ಗ್ರೂಪ್ ‘ಬಿ’ ಹುದ್ದೆಗಳ (Group B posts) ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಏಪ್ರಿಲ್ 15, 2024 ರಿಂದ ಮೇ 15, 2024ರ ವರೆಗೆ ಈ ಹುದ್ದೆಗಳಿಗೆ ಅವಕಾಶವಿದೆ.

8. ಹೊಮಿಯೋಪತಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕರು ಹುದ್ದೆಗಳ ನೇಮಕಾತಿ 

ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಸಹ ಪ್ರಾಧ್ಯಾಪಕರು (Associate Professor) ಹುದ್ದೆಯ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ 22 ಏಪ್ರಿಲ್ 2024 ಹಾಗೂ ಅರ್ಜಿ ಸಲ್ಲಿಸಲು ಮುಕ್ತಾಯಗೊಳ್ಳುವ ದಿನಾಂಕ 21 ಮೇ 2024.

PDO Recruitement Karnataka 2024 : ಗ್ರಾಮ ಪಂಚಾಯತಿ ಪಿಡಿಒ ನೇಮಕಾತಿ | 247 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ

9. ಪದವಿಧರರಿಗೆ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿ

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 76 ಗ್ರೂಪ್ ‘ಸಿ’ ಹುದ್ದೆಗಳ (Group C posts) ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು 29 ಏಪ್ರಿಲ್ 2024 ರಿಂದ ಆರಂಭವಾಗಲಿದ್ದು, 28 ಮೇ 2024 ಕೊನೆ ದಿನಾಂಕವಾಗಿದೆ.

10. ಡಿಪ್ಲೋಮ ಹಾಗೂ ಪದವಿ ಅಭ್ಯರ್ಥಿಗಳಿಗೆ ಗ್ರೂಪ್ ‘ಸಿ’ ಹುದ್ದೆಗಳು

ರಾಜ್ಯದ ವಿವಿಧ ಇಲಾಖೆಗಳಲ್ಲಿ ದ್ವಿತೀಯ ಪಿಯುಸಿ ಹಾಗೂ ಡಿಪ್ಲೋಮಾ ಮುಗಿಸಿದ ಅರ್ಹ ಅಭ್ಯರ್ಥಿಗಳಿಗೆ ಹೈದರಾಬಾದ್ ಕರ್ನಾಟಕ ಸೇರಿ ಒಟ್ಟು 410 Group C ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 29ನೇ ಏಪ್ರಿಲ್ 2024 ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28ನೇ ಮೇ 2024

ಈ ನೇಮಕಾತಿ ವಿವರವು ಸಂಕ್ಷಿಪ್ತ ವಿವರವಾಗಿದ್ದು, ಈ ಎಲ್ಲ ನೇಮಕಾತಿಯ ಸಮಗ್ರ ವಿವರವನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸಂಬ೦ಧಿಸಿದ ಹುದ್ದೆಗಳ ನೇಮಕಾತಿಗೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ವಿವರವನ್ನು ಪರಿಶೀಲಿಸಬಹುದು. ತಮ್ಮ ವಿದ್ಯಾರ್ಹತೆಗೆ ಅರ್ಹವಾಗಿರುವ ಹುದ್ದೆಗೆ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಕೆಪಿಎಸ್ ಸಿ ಅಧಿಕೃತ ಜಾಲತಾಣ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Lok Sabha Election Holiday Declaration : ಎಲ್ಲಾ ನೌಕರರು, ಕಾರ್ಮಿಕರಿಗೆ ಸಂಬಳ ಸಹಿತ ರಜೆ | ಚುನಾವಣಾ ಆಯೋಗದ ಆದೇಶ


Share this Post
WhatsApp Group Join Now
Telegram Group Join Now
error: Content is protected !!