Lok Sabha Election Holiday Declaration : 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ (Lok Sabha Election 2024) ಇಡೀ ದೇಶ ಸಜ್ಜುಗೊಂಡಿದೆ. ದೇಶಾದ್ಯಂತ ನಡೆಯಲಿರುವ ಚುನಾವಣೆ ನಿಮಿತ್ತ ನೀತಿ ಸಂಹಿತೆ (Code of Conduct) ಜಾರಿಗೊಳಿಸಿರುವ ಭಾರತೀಯ ಚುನಾವಣಾ ಆಯೋಗವು (Election Commission of India) ಈ ಸಂಬ೦ಧ ಅನೇಕ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಹಣಕಾಸು ವಹಿವಾಟು, ಚುನಾವಣಾ ಪ್ರಚಾರ ಖರ್ಚುಗಳ ಮೇಲೆ ಮಿತಿ ವಿಧಿಸಿದ್ದು; ಸರ್ವರಿಗೂ ಮತದಾನಕ್ಕೆ ಅನುಕೂಲವಾಗುವಂತೆ ಸಂಬಳ ಸಹಿತ ರಜೆ ಘೋಷಿಸಿ ಆಯೋಗ ಆದೇಶ ಹೊರಡಿಸಿದೆ.
ದೇಶದಲ್ಲಿ ಒಟ್ಟು 46 ದಿನಗಳ ಕಾಲ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು; ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿರುವ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳಿಗೆ ಒಂದು ಹಂತ, ಉಳಿದ 14 ಕ್ಷೇತ್ರಗಳಿಗೆ ಮತ್ತೊಂದು ಹಂತದಲ್ಲಿ ಮತದಾನ ನಡೆಯಲಿದೆ. ವಿಶೇಷವೆಂದರೆ ಎರಡನೇ ಹಂತದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Surpur Assembly By-Election) ಕೂಡ ನಡೆಯಲಿದೆ.
ಮೊದಲ ಹಂತದ ಕ್ಷೇತ್ರಗಳು
ಏಪ್ರಿಲ್ 26ರ ಶುಕ್ರವಾರದಂದು ಮೊದಲ ಹಂತದ ಮತದಾನ ನಡೆಯಲಿದ್ದು; ಈ ಕೆಳಕಂಡ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ:
- ಉಡುಪಿ-ಚಿಕ್ಕಮಗಳೂರು,
- ಹಾಸನ
- ದಕ್ಷಿಣ ಕನ್ನಡ
- ಚಿತ್ರದುರ್ಗ
- ತುಮಕೂರು
- ಮಂಡ್ಯ
- ಮೈಸೂರು
- ಚಾಮರಾಜನಗರ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಉತ್ತರ
- ಬೆಂಗಳೂರು ಕೇಂದ್ರ
- ಬೆಂಗಳೂರು ದಕ್ಷಿಣ
- ಚಿಕ್ಕಬಳ್ಳಾಪುರ
- ಕೋಲಾರ
ಎರಡನೇ ಹಂತದ ಕ್ಷೇತ್ರಗಳು
ಮೇ 07ರ ಮಂಗಳವಾರ ರಂದು ಎರಡನೇ ಹಂತದಲ್ಲಿ ಉಳಿದ 14 ಲೋಕಸಭಾ ಕ್ಷೇತ್ರಗಳು ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು; ಈ ಕೆಳಕಂಡ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ:
- ಚಿಕ್ಕೋಡಿ
- ಬೆಳಗಾವಿ
- ಬಾಗಲಕೋಟೆ
- ವಿಜಯಪುರ
- ಕಲಬುರಗಿ
- ರಾಯಚೂರು
- ಬೀದರ್
- ಕೊಪ್ಪಳ
- ಬಳ್ಳಾರಿ
- ಹಾವೇರಿ
- ಧಾರವಾಡ
- ಉತ್ತರ ಕನ್ನಡ
- ದಾವಣಗೆರೆ
- ಶಿವಮೊಗ್ಗ
ಕಡ್ಡಾಯವಾಗಿ ಸಂಬಳ ಸಹಿತ ರಜೆ ಘೋಷಣೆ
ಮತದಾನ ನಡೆಯಲಿರುವ ಎರಡು ದಿನ ಪ್ರಜಾಪ್ರತಿನಿಧಿ ಕಾಯ್ದೆ 1951 ಹಾಗೂ Negotia- ble Instrument Act 1881ರ ಪ್ರಕಾರ ಸಂಬಳ ಸಹಿತ ಕಡ್ಡಾಯ ರಜೆ ನೀಡಲು ಚುನಾವಣಾ ಆಯೋಗವು ಆದೇಶಿಸಿದೆ. ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರಜೆ ಘೊಷಣೆಯಾಗಿದೆ.
ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡ೦ತೆ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡ೦ತೆ ಏಪ್ರಿಲ್ 26 ಮತ್ತು ಮೇ 07 ರಂದು ನಡೆಯುವ ಚುನಾವಣೆಗೆ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ, ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇವುಗಳನ್ನೂ ಓದಿ:
Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?
Aadhaar Card Update : ಆಧಾರ್ ಅಪ್ಡೇಟ್ | ನಿಮ್ಮ ಮೊಬೈಲ್‌ನಲ್ಲೇ ಅಪ್ಡೇಟ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ…