MGNREGA Karnataka Salary Arrears : ಖಾತ್ರಿಯಾಗದ ನರೇಗಾ ಕೂಲಿ | 3 ತಿಂಗಳಿನಿಂದ ಕೂಲಿ ಹಣ ಬಾಕಿ

Share this Post

MGNREGA Karnataka Salary Arrears : ಮನರೇಗಾ ಯೋಜನೆಯಡಿ ಉದ್ಯೋಗ ‘ಖಾತ್ರಿ’, ಕೂಲಿಗಿಲ್ಲ ‘ಖಾತ್ರಿ’ ಎಂಬ ಗೊಣಗು ಕಾರ್ಮಿಕರ ವಲಯದಲ್ಲಿ ಕೇಳಿ ಬರುತ್ತಿದೆ. ಏಕೆಂದರೆ ಕಳೆದ ಜನವರಿಯಿಂದ ಕಾರ್ಮಿಕರಿಗೆ ಕೂಲಿಯೇ ಪಾವತಿಯಾಗಿಲ್ಲ. ಕೇಂದ್ರ ಸರಕಾರದಿಂದ ಬರಬೇಕಾಗಿದ್ದ ಬರೋಬ್ಬರಿ 434 ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಪಾವತಿ ಬಾಕಿ ಉಳಿದಿದೆ.

WhatsApp Group Join Now
Telegram Group Join Now

ಮೊದಲೇ ಬರಗಾಲದಿಂದ ಕಂಗಾಲಾಗಿರುವ ಕಾರ್ಮಿಕರು ಗ್ಯಾರಂಟಿ ಉದ್ಯೋಗ ಸಿಗುತ್ತದೆ ಎಂಬ ವಿಶ್ವಾಸದ ಮೇಲೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನೇ ನೆಚ್ಚಿದ್ದಾರೆ. ಲಕ್ಷಾಂತರ ಕೂಲಿಕಾರರ ಬದುಕಲ್ಲಿ ಹೊಸಬೆಳಕು ಮೂಡಿಸಿರುವ ಯೋಜನೆ ಇದೀಗ ಕೂಲಿ ಪಾವತಿ ವಿಚಾರದಲ್ಲಿ ಕಾರ್ಮಿಕರ ನಂಬಿಕೆ ಘಾತವನ್ನುಂಟು ಮಾಡುತ್ತಿದೆ.

ಇದನ್ನೂ ಓದಿ: ರೈತರಿಗೆ ವರದಾನ ಅಲ್ಪಾವಧಿಯ ಆಡು ಕುರಿ ಸಾಕಾಣಿಕೆ Short-term sheep and goat farming

ವಲಸೆ ಯಾಕ್ರೀ ನಿಮ್ಮೂರಲ್ಲೇ ಕೆಲಸ ಖಾತ್ರಿ

ರಾಜ್ಯದಲ್ಲಿ ಬರಗಾಲ ಘೋಷಣೆ ಆಗುತ್ತಿದ್ದಂತೆಯೇ ಸರಕಾರ ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲು ಏಪ್ರಿಲ್ 1ರಿಂದ ‘ವಲಸೆ ಯಾಕ್ರೀ ನಿಮ್ಮೂರಲ್ಲೇ ಕೆಲಸ ಖಾತ್ರಿ’ ಎಂದು ಅಭಿಯಾನ ಆರಂಭಿಸಿದೆ. ಬರಗಾಲಕ್ಕೆ ಗುಳೆ ಹೋಗುವುದನ್ನು ತಪ್ಪಿಸುವಲ್ಲಿ ಈ ಅಭಿಯಾನ ಕೊಂಚ ಯಶಸ್ವಿಯೂ ಆಗಿದೆ.

ಜತೆಗೆ ರಾಜ್ಯ ಸರಕಾರದ ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆಗಳ ನೆರವು ಸಿಗುತ್ತಿರುವುದರಿಂದ ಪ್ರತೀ ವರ್ಷವೂ ಬರಗಾಲ ಬರಲಿ ಬಾರದಿರಲಿ, ಬೇಸಿಗೆಗೆ ಗುಳೆ ಹೋಗುತ್ತಿದ್ದ ಅನೇಕ ಕಾರ್ಮಿಕರು ಇದೀಗ ಊರಲ್ಲೇ ಮನರೇಗಾ ಯೋಜನೆಯಡಿ ಸಿಗುವ ಕೂಲಿಯನ್ನೇ ನೆಚ್ಚಿದ್ದಾರೆ.

ಇದೀಗ ಕೂಲಿ ಹಣ ಬಾಕಿ ಇರುವುದರಿಂದ ಕೂಲಿಕಾರರು ಆಸಕ್ತಿ ತೋರಿಸುತ್ತಿಲ್ಲ. ಬೇಸಿಗೆ ದಿನಗಳಲ್ಲಷ್ಟೇ ಖಾತ್ರಿ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಾರೆ. ಮಳೆಗಾಲ ಆರಂಭವಾದರೆ ಕೃಷಿ ಚಟುವಟಿಕೆ ಶುರುವಾಗುವುದರಿಂದ ಕಾರ್ಮಿಕರು ಸಿಗುವುದಿಲ್ಲ. ಹಾಗಾಗಿ ಖಾತ್ರಿ ಕಾಮಗಾರಿಗಳು ನನೆಗುದಿಗೆ ಬೀಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: PDO Recruitement Karnataka 2024 : ಗ್ರಾಮ ಪಂಚಾಯತಿ ಪಿಡಿಒ ನೇಮಕಾತಿ | 247 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ

ಹೆಚ್ಚಿದ ಕೂಲಿ ಬಾರದ ಪಗಾರು

ಈಚೇಗಷ್ಟೇ ಮನರೇಗಾ ಯೋಜನೆಯ ಕೂಲಿ ದರವನ್ನು 33 ರೂಪಾಯಿ ಹೆಚ್ಚಿಸಲಾಗಿದೆ. ಈತನಕ ದಿನಕ್ಕೆ 316 ರೂಪಾಯಿ ಸಿಗುತ್ತಿದ್ದ ಕೂಲಿ ಇದೀಗ ಏಪ್ರಿಲ್ ತಿಂಗಳಿAದ 349 ರೂಪಾಯಿ ಕೂಲಿ ಸಿಗುತ್ತಿದೆ ಎಂಬ ಹೆಮ್ಮೆಯ ನಡುವೆ ಹಳೆ ಬಾಕಿ ಪಾವತಿ ಆಗದೇ ಇದ್ದದ್ದು ಕಾರ್ಮಿಕರ ಆತಂಕವನ್ನು ಹೆಚ್ಚಿಸಿದೆ.

ಮನರೇಗಾ ಕೂಲಿ ಪಾವತಿಸುವ ರಾಜ್ಯದ ಎನ್‌ಇಎಫ್‌ಎಂಎಸ್ (National Electronic Fund Management System) ಅಕೌಂಟ್‌ನಲ್ಲಿ ಹಣವೇ ಇಲ್ಲ. ಹೀಗಾಗಿ ಕೂಲಿಕಾರರಿಗೆ ಸರ್ಕಾರದಿಂದ ಹಣ ಪಾವತಿಯಾಗಿಲ್ಲ. ಬರ ಪರಿಸ್ಥಿತಿಯಲ್ಲಿ ಕೂಲಿ ಮಾಡಿದ್ದಕ್ಕೆ ಹಣ ಪಾವತಿಯಾಗದೇ ಇರುವುದು ಕೂಲಿ ಕಾರ್ಮಿಕರಿಗೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.

ಇದನ್ನೂ ಓದಿ: Incentive for the simple Marriage : ಸರಳ ವಿವಾಹಕ್ಕೆ ₹50,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ…

ಯಾವಾಗ ಸಿಗಲಿದೆ ಕೂಲಿ?

ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ನರೇಗಾ ಕೂಲಿ ಪಾವತಿ ಮಾಡುವ ‘ಎನ್‌ಇಎಫ್‌ಎಂಎಸ್ ಖಾತೆಗೆ’ ಹಣ ಬಿಡುಗಡೆ ಆಗಬಹುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇಲಾಖೆಯ ಆಯುಕ್ತರಾದ ಪವನಕುಮಾರ ಮಾಲಪೇಟ ಅವರು ಕೂಡ ಕೇಂದ್ರ ಸರ್ಕಾರದಿಂದ ಬರಬೇಕಿರುವ ಮನರೇಗಾ ಕಾರ್ಮಿಕರಿಗೆ ಕೂಲಿ ಬಾಕಿ ಮೊತ್ತ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಹಣ ಬಿಡುಗಡೆಯಾಗುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದ ಇನ್ನೂ ಬಂದಿಲ್ಲ. ಇನ್ನೇನು ವಾರ ಅಥವಾ ಎರಡು ವಾರದಲ್ಲಿ ಬಿಡುಗಡೆಯಾಗಬಹುದು ಎನ್ನುತ್ತಾರೆ.

ಅತೀ ಹೆಚ್ಚು ಕೂಲಿ ಬಾಕಿ ಉಳಿದಿರುವ ಜಿಲ್ಲೆಗಳು
  • ಬೆಳಗಾವಿ 33.75 ಕೋಟಿ ರೂ.
  • ರಾಯಚೂರು 33.35 ಕೋಟಿ ರೂ.
  • ಕಲಬುರಗಿ 29.63 ರೂ.
  • ಚಿತ್ರದುರ್ಗ 28.98 ರೂ.
  • ತುಮಕೂರು 27,71 ರೂ.
  • ಬೀದರ್ 24.15 ರೂ.
  • ಯಾದಗಿರಿ 23.61 ರೂ.
  • ಕೊಪ್ಪಳ 23.25 ಕೋಟಿ ರೂ.

ಇದನ್ನೂ ಓದಿ: Caste and Income certificate : ನಿಮ್ಮ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ ಪಡೆಯಿರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ


Share this Post
WhatsApp Group Join Now
Telegram Group Join Now
error: Content is protected !!