mushroom cultivation information : ಅತೀ ಕಡಿಮೆ ಜಾಗ ಮತ್ತು ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತರುವ ಅಣಬೆ ಕೃಷಿ ಸಣ್ಣ ರೈತರಿಗೆ, ನಿರುದ್ಯೋಗಿ ಯುವಕ/ಯುವತಿಯರಿಗೆ, ಕೃಷಿ ಕುಟುಂಬದ ಮಹಿಳೆಯರಿಗೆ ವರದಾನವಾಗಿದೆ. ಇದಕ್ಕೆ ಸರಕಾರದ ಸಹಾಯಧನವೂ ಲಭ್ಯವಿದೆ. ಅಣಬೆ ಬೇಸಾಯ ಕ್ರಮ, ಮಾರುಕಟ್ಟೆ, ಸರಕಾರದ ಸಹಾಯಧನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ….
ಅಣಬೆ ಬೇಸಾಯದಿಂದ ದೊಡ್ಡ ಸಂಪಾದನೆ ಮಾಡುತ್ತಿರುವ ಹಲವಾರು ರೈತರಿದ್ದಾರೆ. ಈ ಬೆಳೆಯನ್ನು ಬೆಳೆಯಲು ನಿಮಗೇನು ಕೃಷಿ ಭೂಮಿ ಬೇಕಾಗಿಲ್ಲ. ಮನೆಯ ತಾರಸಿ ಅಥವಾ ಅಥವಾ ಬಂಜರು ಭೂಮಿಯಲ್ಲಿ ಕೂಡ ಮಾಡಬಹುದು. ಕೇವಲ ಒಂದು ಶೆಡ್ ನಿರ್ಮಿಸಿದರೆ ಸಾಕು ಅದರ ಮೂಲಕ ಕೈ ತುಂಬ ಹಣ ಸಂಪಾದಿಸಬಹುದು.
ಅಣಬೆಯಲ್ಲಿ ಪ್ರೊಟೀನ್, ಕಬ್ಬಿಣ ಹಾಗೂ ತುಂಬಾನೇ ಮಿಟಿಮಿನ್ ಡಿ ಇರುತ್ತದೆ. ಇದು ಡಯಾಬಿಟಿಸ್ ಇರುವರಿಗೆ ತುಂಬಾ ಒಳ್ಳೆಯದು. ಹಾಗಾಗಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೂ ಕೂಡ ಇದು ಒಳ್ಳೆಯ ಆಹಾರ ಎಂದು ಹೇಳಬಹುದು.
ಅಣಬೆಯ ಬಳಕೆ ಭಾರತದಲ್ಲಿ ಬಹಳ ಕಡಿಮೆ. ಆದರೆ ಬೇರೆ ರಾಷ್ಟçಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಅಣಬೆ ಬೇಡಿಕೆ ತುಂಬಾ ಹೆಚ್ಚುತ್ತಿದೆ. ಹೀಗಾಗಿ ನಮ್ಮ ರೈತರು ಕೃಷಿಯೊಂದಿಗೆ ಅಣಬೆ ಫಸಲು ತೆಗೆಯುತ್ತಾ ಹೆಚ್ಚಿನ ಹಣವನ್ನು ಗಳಿಸಬಹುದು. ಅಣಬೆ ಬೇಸಾಯಕ್ಕೆ ತಂಪಾದ ಗಾಳಿ ಹಾಗೂ ಮಂದ ಬೆಳಕು ಇರುವಂತಹ ಜಾಗ ಬೇಕು.
ಗಾಳಿಯಾಡುವ ಸ್ವಚ್ಛವಾರುವ ಪ್ರದೇಶದಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಅಣಬೆ ಬೆಳೆಯಲು ಮುಖ್ಯವಾಗಿ ಬೇಕಾಗಿರೋದು ಒಣಗಿದ ಕೃಷಿ ತ್ಯಾಜ್ಯ. ಅದು ಭತ್ತದ ಹುಲ್ಲು ಆಗಿರಬಹುದು ಅಥವಾ ಗೋಧಿ ಹುಲ್ಲು ಆಗಿರಬಹುದು. ಇಲ್ಲವೇ ರಾಗಿ, ಜೋಳದ ದಂಟು ಕೂಡ ಇರಬಹುದು.
ರಾತ್ರಿ ಹೊತ್ತು ಹುಲ್ಲನ್ನು ಚೆನ್ನಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ ಎಂಟರಿ೦ದ ಹತ್ತು ಗಂಟೆ ನೀರಿನಲ್ಲಿ ನೆನೆಸಬೇಕು. ಅದು ನೆನೆದ ನಂತರ ಬೆಳಗ್ಗೆ ಅದನ್ನು ಮತ್ತೊಮ್ಮೆ ಬಿಸಿನೀರಿನಲ್ಲಿ ಕುದಿಸಬೇಕು. ಹೀಗೆ ಮಾಡುವುದರ ಮೂಲಕ ಹುಲ್ಲಿನಲ್ಲಿರುವ ಬ್ಯಾಕ್ಟೀರಿಯಾ ಅಥವಾ ಕ್ರಿಮಿಕೀಟಗಳನ್ನು ಕೊಲ್ಲಬಹುದು ಹಾಗೂ ಹುಲ್ಲು ಕೂಡ ಮೆತ್ತಗೆ ಆಗುತ್ತದೆ. ಹೀಗೆ ಮೆತ್ತಗೆ ಮಾಡಿದ ಹುಲ್ಲನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಒಂದು ಪದರ ಹುಲ್ಲು ಹಾಗೂ ಅದರ ಮೇಲೆ ಸ್ವಲ್ಪ ಅಣಬೆ ಬೀಜಗಳನ್ನು ಉದುರಿಸಬೇಕು.
ಮತ್ತೆ ಒಂದು ಪದರ ಹುಲ್ಲು ಹಾಕಬೇಕು. ಮತ್ತೆ ಅಣಬೆ ಬೀಜವನ್ನು ಹಾಕಬೇಕು. ಅಣಬೆ ಬೀಜಗಳನ್ನು ಸುತ್ತಲು ಕೂಡ ಪ್ಲಾಸ್ಟಿಕ್ ಹಾಳೆಯಲ್ಲಿ ಕಾಣುವಹಾಗೆ ಹಾಕಬೇಕು. ಮಧ್ಯದಲ್ಲಿ ಹಾಕಬಾರದು. ಹೀಗೆ ಒಂದೊ೦ದು ಪದರಗಳನ್ನು ರಚಿಸುತ್ತಾ ಹೋಗಿ ಹಾಳೆ ತುಂಬಿದಾಗ ಮೇಲೆ ಒಂದು ಪದರು ಬೀಜವನ್ನು ಉದುರಿಸಿ ಹಾಳೆಯನ್ನು ಚೆನ್ನಾಗಿ ಕಟ್ಟಬೇಕು.
ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?
ಗಾಳಿಯಾಡುವ ಸಲುವಾಗಿ ಸಣ್ಣ ಸಣ್ಣ ತೂತುಗಳನ್ನು ಮಾಡಬೇಕು. ಈ ರೀತಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ನಂತರ ಅದನ್ನು ಅಣಬೆ ಶೆಡ್‌ನಲ್ಲಿ ಇಡಬೇಕು. ನೀವು ಎಷ್ಟು ಅಣಬೆಯನ್ನು ಉತ್ಪಾದಿಸಬಹುದು ಎಂದು ನಿರ್ಧಾರಿಸುತ್ತೀರೋ ಅದಕ್ಕೆ ಅನುಗುಣವಾಗಿ ನಿಮ್ಮ ಶೆಡ್ ವಿಸ್ತೀರ್ಣವು ಇರಬೇಕು. 15ರಿಂದ 20 ದಿನಗಳಲ್ಲಿ ಅಣಬೆಗಳಲ್ಲಿ ಮೊಳಕೆ ಒಡೆಯುತ್ತದೆ. ಆಗ ಹುಲ್ಲನ್ನು ಹೊರಗೆ ತೆಗೆದು ಅದಕ್ಕೆ ಪ್ರತಿದಿನ ನೀರನ್ನು ಚಿಮುಕಿಸಬೇಕು.
ಹೀಗೆ ಮುಂದಿನ 10 ದಿನಗಳಲ್ಲಿ ಅಣಬೆ ತಯಾರಾಗಿರುತ್ತದೆ. ಕಟಾವು ಮಾಡಿಕೊಂಡು ಹತ್ತಿರದಲ್ಲಿರುವ ಮಾರ್ಕೆಟ್‌ಲ್ಲಿ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡಬಹುದು. ಬೆಳೆದ ಅಣಬೆಗೆ ನೂರರಿಂದ ಮುನ್ನೂರು ರೂಪಾಯಿ ವರೆಗೆ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ದೊರಕುತ್ತದೆ. ಅಣಬೆಯ ಗುಣಮಟ್ಟದ ಮೇಲೆ ಬೆಲೆ ಸಿಗುತ್ತದೆ.
ಅಣಬೆ ಬೀಜಕ್ಕೆ ಪ್ರತಿ ಕೆ.ಜಿಗೆ 70ರಿಂದ 80 ರೂಪಾಯಿ ಬೆಲೆ ಇದೆ. ಒಂದು ಕೆಜಿ ಅಣಬೆ ಬೀಜಗಳಿಂದ 20 ರಿಂದ 25 ಕೆ.ಜಿ ಅಣಬೆಯನ್ನು ಬೆಳೆಯಬಹುದು. ಹಾಗಾಗಿ ಕಡಿಮೆ ಕರ್ಚಿನಲ್ಲಿ ಕಡಿಮೆ ಜಾಗದಲ್ಲಿ ಅಣಬೆ ಕೃಷಿ ಮಾಡಬಹುದು.
ಒಂದೊಮ್ಮೆ ಅಣಬೆಯನ್ನು ಸರಿಯಾದ ಸಮಯಕ್ಕೆ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಒಣಗಿಸಿಡಬಹುದು. ಒಣಗಿಸಿದ ಅಣಬೆ ಕೆಜಿಗೆ 3 ಸಾವಿರ ರೂಪಾಯಿ ವರೆಗೂ ಮಾರಾಟವಾಗುತ್ತದೆ. ಅಣಬೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯಬಹುದು. ಅನ್ನ, ರಸಂ, ತರಕಾರಿ ಹೀಗೆ ಯಾವುದೇ ಬಗೆಯ ಅಡುಗೆಯಲ್ಲಾದರೂ ಪುಡಿ ಬೆರಸಬಹುದು. ಶೇಂಗಾ, ಎಳ್ಳು ಮುಂತಾದ ಬಗೆಬಗೆಯ ಚಟ್ನಿ ಪುಡಿಗಳಲ್ಲೂ ಅಣಬೆ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.
ಅಣಬೆ ಬೆಳೆಯುವ ರೈತರಿಗೆ, ಸ್ವಸಹಾಯ ಗುಂಪುಗಳಿಗೆ ಶೆಡ್ ನಿರ್ವಣಕ್ಕಾಗಿ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಶೆಡ್‌ಗಾಗಿ 95 ಸಾವಿರ ರೂಪಾಯಿ ನೀಡಲಾಗುತ್ತದೆ. ವ್ಯವಸಾಯ ಮೂಲದಿಂದ ಬರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಮನೆ ಅಂಗಳದಲ್ಲಿಯೇ ಅಣಬೆ ಬೆಳೆಯಬಹುದು. ಹೆಚ್ಚಿನ ಭೂಮಿಯ ಅಗತ್ಯವಿಲ್ಲ. ಕಡಿಮೆ ಅವಧಿಯಲ್ಲಿ, ಅತ್ಯಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.
ವಿದ್ಯಾವಂತ ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ಅಣಬೆ ಕೃಷಿ ವರದಾನವಾಗಿದೆ. ಹಾಗಾಗಿ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಹಾಗೂ ಬೀಜ ಎಲ್ಲಿ ಸಿಗುತ್ತದೆ, ಮಾರಾಟ ಎಲ್ಲಿ ಮಾಡಬಹುದು ಹಾಗೂ ಅದಕ್ಕೆ ಸಂಬAಧಿಸಿದ ಸಬ್ಸಿಡಿ ಹಾಗೂ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಇದನ್ನೂ ಓದಿ: Free Horticulture training 2024 : ಸಂಬಳದ ಸಹಿತ ಉಚಿತ ತೋಟಗಾರಿಕೆ ತರಬೇತಿ | ರೈತ ಮಕ್ಕಳೇ ಇದರ ಪ್ರಯೋಜನ ಪಡೆಯಿರಿ