ಕಡಿಮೆ ಬಡ್ಡಿಯಲ್ಲಿ 2 ಲಕ್ಷ ರೂಪಾಯಿ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ… PM Vishwakarma Yojana 2024

Share this Post

PM Vishwakarma Yojana 2024 : ಪ್ರಧಾನಿ ನರೇಂದ್ರ ಮೋದಿಯವರು ಕಳೆದ 2023ರ ಆಗಸ್ಟ್ 15ರ 77ನೇ ಸ್ವಾತಂತ್ರ‍್ಯ ದಿನಾಚರಣೆ ನಿಮಿತ್ತ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಅತಿ ಕಡಿಮೆ ಬಡ್ಡಿದರದಲ್ಲಿ 2 ಲಕ್ಷ ರೂಪಾಯಿ ವರೆಗೆ ಸಾಲ, ವೇತನ ಸಹಿತ ಕೌಶಲ್ಯ ತರಬೇತಿ ಇತ್ಯಾದಿ ಸೌಲಭ್ಯಗಳು ಸಿಗಲಿವೆ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now
ಪಿಎಂ ವಿಶ್ವಕರ್ಮ ಯೋಜನೆ

ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಗಾರೆ ಕೆಲಸಗಾರರು, ಡೋಬಿ, ಟೈಲರ್, ಮಾಲೆ, ಮೀನು ಬಲೆ ತಯಾರಕರು, ಕ್ಷೌರಿಕರು ಸೇರಿದಂತೆ ವಿವಿಧ ಕಸುಬುದಾರರನ್ನು ಮತ್ತು ಅಂತಹ ಕುಟುಂಬಗಳನ್ನು ಸಬಲೀಕರಣಗೊಳಿಸಲು ‘ಪಿಎಂ ವಿಶ್ವಕರ್ಮ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದು ಸುಮಾರು 13ರಿಂದ 15 ಸಾವಿರ ಕೋಟಿ ರೂಪಾಯಿಗಳ ಹಂಚಿಕೆಯೊ೦ದಿಗೆ ಆರಂಭವಾಗುವ ಯೋಜನೆ ಎಂದು ಪ್ರಧಾನಿ ಹೇಳಿದ್ದಾರೆ.

ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2023ರ ಆಗಸ್ಟ್ 16ರಂದು ನಡೆದ ಆರ್ಥಿಕ ವ್ಯವಹಾರಗಳ ಸಂಸತ್ತು ಸಮಿತಿ ಸಭೆಯಲ್ಲಿ ಹೊಸದಾದ ಕೇಂದ್ರ ಸರ್ಕಾರದ ಯೋಜನೆ ‘ಪಿಎಂ ವಿಶ್ವಕರ್ಮ’ಕ್ಕೆ ಅನುಮೋದನೆ ನೀಡಲಾಗಿದೆ. ಹಣಕಾಸು ವರ್ಷ 2023-24 ರಿಂದ ಹಣಕಾಸು ವರ್ಷ 2027-28ರ ಐದು ವರ್ಷಗಳ ಅವಧಿಯ 13,000 ಕೋಟಿ ರೂಪಾಯಿಯ ಯೋಜನೆ ಇದಾಗಿದೆ.

ಈ ಯೋಜನೆಯಡಿ ವೃದ್ಧರಿಗೆ ಸಿಗಲಿದೆ ಪ್ರತಿ ತಿಂಗಳು ₹5000 | ಕೂಡಲೇ ನಿಮ್ಮ ಹೆಸರು ನೋಂದಾಯಿಸಿ Atal Pension Yojana (APY)

ಏನೆಲ್ಲ ಸೌಲಭ್ಯ ಸಿಗಲಿದೆ?

‘ಪಿಎಂ ವಿಶ್ವಕರ್ಮ’ ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕಲೆಗಾರರು ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, 1 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ (ಮೊದಲ ಭಾಗ) ಮತ್ತು 2 ಲಕ್ಷ ರೂಪಾಯಿ (ಎರಡನೇ ಭಾಗ) ಶೇಕಡ 5ರಷ್ಟು ಬಡ್ಡಿದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. 18 ಸಾಂಪ್ರದಾಯಿಕ ವಹಿವಾಟುಗಳು ಈ ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಒಳಗೊಳ್ಳುತ್ತವೆ.

ಆಧುನಿಕ ಉಪಕರಣಗಳನ್ನು ಖರೀದಿಸಲು ಈ ಕುಶಲಕರ್ಮಿಗಳಿಗೆ 15,000 ರೂಪಾಯಿ ವರೆಗೆ ಬೆಂಬಲ, ಕೌಶಲ್ಯ ತರಬೇತಿ ಪಡೆಯುತ್ತಿರುವ ಫಲಾನುಭವಿಗಳಿಗೆ ದಿನಕ್ಕೆ 500 ರೂಪಾಯಿ ಸ್ಟೇಫಂಡ್ ಅನ್ನು ಸಹ ನೀಡಲಾಗುತ್ತದೆ. ಇದೇ ವರ್ಷ 2024 ರಿಂದ 2028ರ ವರೆಗೆ ಒಟ್ಟು ವರ್ಷಗಳಲ್ಲಿ ಒಟ್ಟು 30 ಲಕ್ಷ ಕುಟುಂಬಗಳಿಗೆ ರಕ್ಷಣೆ ನೀಡಲಾಗುವುದು ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.

PM Vishwakarma Yojana 2024
ಯಾರು ಅರ್ಜಿ ಸಲ್ಲಿಸಲು ಅರ್ಹರು?
  • ಬಡಗಿ
  • ದೋಣಿ ತಯಾರಕ
  • ರಕ್ಷಾಕವಚ ತಯಾರಕ
  • ಕಮ್ಮಾರ
  • ಕ್ಷೌರಿಕ
  • ಮಾಲೆ ತಯಾರಕ
  • ಧೋಬಿ ಅಥವಾ ಮಡಿವಾಳ
  • ಟೈಲರ್
  • ಮೀನಿನ ಬಲೆ ತಯಾರಕ
  • ಸುತ್ತಿಗೆ ಮತ್ತು ಇತರೆ ಸಾಮಾಗ್ರಿ ತಯಾರಿಕ
  • ಅಕ್ಕಸಾಲಿಗರು
  • ಕಮ್ಮಾರ
  • ಮೂರ್ತಿ ಮಾಡುವ ಶಿಲ್ಪಿ, ಕಲ್ಲು ಒಡೆಯುವವನು
  • ಚಮ್ಮಾರ, ಪಾದರಕ್ಷೆ ತಯಾರಕ
  • ಗಾರೆ ಮೇಸ್ತ್ರಿ
  • ಬುಟ್ಟಿ/ ಚಾಪೆ/ ಹಿಡಿಸೂಡಿ ತಯಾರಿಕರು, ಸೆಣಬು ನೇಕಾರರು
  • ಗೊಂಬೆ ಮತ್ತು ಆಟಿಕೆ ತಯಾರಕ (ಸಾಂಪ್ರದಾಯಿಕ)

ಮುಂಗಾರು 2024-25: ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕ ನಿಗದಿ | ಈ ದಿನಾಂಕದ ಒಳಗೇ ಪ್ರೀಮಿಯಂ ಪಾವತಿಸಿ Mungaru bele vime Kharif Crop Insurance 2024

ಈ ಯೋಜನೆಗೆ ನೋಂದಣಿ ಹೇಗೆ?

ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಹಾಗೂ ನಗರ ಮಟ್ಟದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್ ಆಧಾರಿತ ‘ಪಿಎಂ ವಿಶ್ವಕರ್ಮ’ ವೆಬ್ ಪೋರ್ಟಲ್ pmvishwakarma.gov.in ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಯೋಜನೆಗೆ ನೋಂದಣಿ ಮಾಡಿಕೊಂಡರೆ ಗುರುತಿನ ಚೀಟಿ ಹಾಗೂ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಸಿಗಲಿದೆ.

ನೋಂದಣಿ ಮಾಡಿಕೊಳ್ಳುವ ಸಮಯಕ್ಕೆ ಫಲಾನುಭವಿಯ ವಯಸ್ಸು 18 ವರ್ಷ ಪೂರ್ತಿಯಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

ಹೆಚ್ಚಿನ ಮಾಹಿತಿಗೆ pmvishwakarma.gov.in

Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?


Share this Post
WhatsApp Group Join Now
Telegram Group Join Now

Leave a Comment

error: Content is protected !!