Post office Saving Schemes : ಉಳಿತಾಯ ಮಾಡುವವರಿಗೆ ಅಂಚೆ ಕಚೇರಿಯ ಲಾಭದಾಯಕವಾದ ಈ ಯೋಜನೆಗಳು 100% ಲಾಭವನ್ನು ಕೊಡಬಲ್ಲವು. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರಿಗೆ ಯಾವ ಯೋಜನೆಗಳಿಗೆ ಎಷ್ಟು ಬಡ್ಡಿದರ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ…
ಪ್ರತಿಯೊಬ್ಬರು ತಮ್ಮ ದುಡಿಮೆಯ ಕೆಲವು ಭಾಗವನ್ನು ಭವಿಷ್ಯದ ಯೋಜನೆಗಳಿಗಾಗಿ (Future Plans) ಉಳಿತಾಯ ಮಾಡುವ ಕನಸನ್ನು ಹೊಂದಿರುತ್ತಾರೆ. ಆದರೆ ಹಲವಾರು ಜನರಿಗೆ ಹೆಚ್ಚಿನ ಬಡ್ಡಿ ದರ ಯಾವ ಉಳಿತಾಯ ಯೋಜನೆಗಳಲ್ಲಿ ಸಿಗುತ್ತವೆ ಎಂಬ ಸರಿಯಾದ ಮಾರ್ಗದರ್ಶನವಿಲ್ಲದೆ, ಎಲ್ಲೆಲ್ಲೋ ಹೂಡಿಕೆ ಮಾಡಿ ಬಿಡುತ್ತಾರೆ. ಇಂದಿನ ಈ ಲೇಖನದಲ್ಲಿ ನಾವು ಅಂಚೆ ಕಚೇರಿಯಲ್ಲಿ ಹೆಚ್ಚಿನ ಬಡ್ಡಿ ದರ ನೀಡುವ ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ.
ಇದನ್ನೂ ಓದಿ: ಮನೆ ಬಾಗಿಲಿಗೇ ಮಾವು ಸರಬರಾಜು Post Office Mango Supply Scheme
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು Post Office Saving Schemes
- ಹಿರಿಯ ನಾಗರಿಕ ಉಳಿತಾಯ ಯೋಜನೆ (Senior citizen savings scheme)
- ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (National Savings certificate)
- ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public provident fund)
- ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra scheme)
- ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)
- ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post office savings account)
- ಮರುಕಳಿಸುವ ಠೇವಣಿ (Recurring deposit)
- ಫಿಕ್ಸೆಡ್ ಡೆಪಾಸಿಟ್ ಮತ್ತು ಟೈಮ್ ಡೆಪಾಸಿಟ್ (Fixed Deposit and Time Deposit)
…ಹೀಗೆ ಅಂಚೆ ಇಲಾಖೆಯಲ್ಲಿ ಹಲವು ಉಳಿತಾಯ ಯೋಜನೆಗಳಿದ್ದು; ಇವುಗಳು ಬಹುತೇಕ 100% ಗ್ಯಾರಂಟಿ ಲಾಭ ತರುವ ಯೋಜನೆಗಳಾಗಿವೆ. ಈ ಯೋಜನೆಗಳ ಸಂಕ್ಷಿಪ್ತ ವಿವರವನ್ನು ಗಮನಿಸೋಣ:
1. ಹಿರಿಯ ನಾಗರಿಕ ಉಳಿತಾಯ ಯೋಜನೆ (Senior citizen savings scheme)
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹೂಡಿಕೆ ಮಾಡುವುದಾದರೆ ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ, ತಮ್ಮ ಉಳಿತಾಯದ ಮೇಲೆ 8.2% ರಷ್ಟು ಬಡ್ಡಿ ದರ (Rate of Interest) ಸಿಗುತ್ತದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ತೆರಿಗೆ ಪ್ರಯೋಜನೆಯನ್ನು ಕೂಡ ಪಡೆಯಬಹುದು.
ಉದಾಹರಣೆಗೆ, ನೀವು ಯೋಜನೆಯ ಅಡಿಯಲ್ಲಿ 30 ಲಕ್ಷವನ್ನು ಠೇವಣಿ ಮಾಡಿದರೆ, ಪ್ರತಿ ಮೂರು ತಿಂಗಳಿಗೊಮ್ಮೆ ನಿಮಗೆ 61,500 ರೂಪಾಯಿ ಬಡ್ಡಿ ಹಣ ಸಿಗಲಿದೆ. 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮತ್ತು ನಿವೃತ್ತಿ ಹೊಂದಿದ ನೌಕರರಿಗೆ ಇದು ಒಂದು ಉತ್ತಮ ಉಳಿತಾಯ ಯೋಜನೆಯಾಗಿದೆ.
ಇದನ್ನೂ ಓದಿ: Lok Sabha Election Holiday Declaration : ಎಲ್ಲಾ ನೌಕರರು, ಕಾರ್ಮಿಕರಿಗೆ ಸಂಬಳ ಸಹಿತ ರಜೆ | ಚುನಾವಣಾ ಆಯೋಗದ ಆದೇಶ
2. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (National Savings certificate)
ಅಂಚೆ ಕಚೇರಿಯ ಅದ್ಭುತ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯು ಐದು ವರ್ಷಗಳ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಠೇವಣಿ ಇಡಲು ಯಾವುದೇ ರೀತಿಯ ಗರಿಷ್ಠ ಠೇವಣಿ ಮಿತಿ ಇಲ್ಲ. ಒಮ್ಮೆ ನೀವು ಐದು ವರ್ಷಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ವಾರ್ಷಿಕ 7.7% ಬಡ್ಡಿ ದರವನ್ನು ಪಡೆಯುತ್ತಿರಿ.
ಉದಾಹರಣೆಗೆ, ಒಂದು ವೇಳೆ ನೀವು 10 ಲಕ್ಷ ರೂಪಾಯಿ ಠೇವಣಿ ಮಾಡಿದರೆ ಐದು ವರ್ಷಗಳ ನಂತರ ನಿಮ್ಮ ಮೆಚುರಿಟಿ ಮೊತ್ತವು 14,64,247 ರೂಪಾಯಿ ಆಗಿರುತ್ತದೆ. ದೀರ್ಘಕಾಲದ ಉಳಿತಾಯ (long term investment) ಯೋಜನೆ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.
3. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public provident fund)
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯು 15 ವರ್ಷಗಳ ಅವಧಿಯ ಯೋಜನೆಯಾಗಿದ್ದು, ಹೂಡಿಕೆದಾರರಿಗೆ ಹೆಚ್ಚಿನ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆ ಅಡಿಯಲ್ಲಿ ನೀವು ಠೇವಣಿ ಮಾಡುವುದಾದರೆ, 7.1% ಬಡ್ಡಿ ದರ ನಿಮಗೆ ಸಿಗಲಿದೆ.
ಉದಾಹರಣೆಗೆ, ನೀವು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ಠೇವಣಿ ಮಾಡುವುದಾದರೆ ಮೆಚ್ಯುರಿಟಿ ಅವಧಿಯ ನಂತರ ಅಂದರೆ 15 ವರ್ಷಗಳ ಅವಧಿ ನಂತರ ನಿಮಗೆ 15,77,840 ರೂಪಾಯಿ ಹಣ ಸಿಗಲಿದೆ.
4. ಕಿಸಾನ್ ವಿಕಾಸ ಪತ್ರ ಯೋಜನೆ (Kisan Vikas Patra scheme)
ಅಂಚೆ ಕಚೇರಿಯ ಈ ಯೋಜನೆಯು ನೀವು ಠೇವಣಿ ಮಾಡುವ ಹಣವನ್ನು ದ್ವಿಗುಣಗೊಳಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದರೆ ವಾರ್ಷಿಕ ನಿಮಗೆ 7.5% ಬಡ್ಡಿ ದರ ಸಿಗಲಿದ್ದು, ನೀವು ಹೂಡಿಕೆ ಮಾಡಿದ ಹಣ 9 ವರ್ಷ 7 ತಿಂಗಳಲ್ಲಿ ದ್ವಿಗುಣಗೊಳ್ಳಲಿದೆ.
5. ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)
ಅಂಚೆ ಕಚೇರಿಯ ಈ ಯೋಜನೆಯು ವಿಶೇಷವಾಗಿ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿಯೆ ಜಾರಿಗೆ ತಂದ ಯೋಜನೆಯಾಗಿದೆ. ಈ ಒಂದು ಉಳಿತಾಯ ಯೋಜನೆಯ ಅಡಿಯಲ್ಲಿ 15 ವರ್ಷಗಳ ಅವಧಿಗೆ ಅಥವಾ ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಠೇವಣಿಯಲ್ಲಿ ಹಣ ಇಡಬಹುದು.
ಈ ಯೋಜನೆಯ ಅಡಿಯಲ್ಲಿ ನೀವು ಠೇವಣಿ ಇಡುವುದಾದರೆ ನಿಮಗೆ ವಾರ್ಷಿಕ 8.2% ಬಡ್ಡಿ ದರ ಸಿಗಲಿದೆ. ಉದಾಹರಣೆಗೆ, ನೀವು ಪ್ರತಿ ತಿಂಗಳು 5000 ರೂಪಾಯಿ ಠೇವಣಿ ಇಟ್ಟರೆ ಅವಧಿಯ ನಂತರ ನಿಮಗೆ 26,97,246 ರೂಪಾಯಿ ಸಿಗಲಿದೆ.
6. ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post office savings account)
ಪೋಸ್ಟ್ ಆಫೀಸಿನ ಉಳಿತಾಯ ಖಾತೆಯಲ್ಲಿ ನಿಮಗೆ ವಾರ್ಷಿಕ 4% ಬಡ್ಡಿ ದರ ಸಿಗಲಿದೆ. ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಲು ಕನಿಷ್ಠ ಠೇವಣಿ ಮೊತ್ತ 500 ರೂಪಾಯಿ ಆಗಿದೆ.
ಅಂಚೆ ಕಚೇರಿಯ ಇನ್ನು ಹೆಚ್ಚಿನ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಬಹುದು ಹಾಗೂ ಮೇಲೆ ತಿಳಿಸಲಾಗಿರುವ ಎಲ್ಲಾ ಉಳಿತಾಯ ಯೋಜನೆಗಳು ಅಂಚೆ ಕಚೇರಿಯ ಉಳಿತಾಯ ಯೋಜನೆಗಳಾಗಿವೆ.
ಈ ಕೆಳಗಿನ ಲೇಖನದಲ್ಲಿ ನಾವು ಪ್ರತಿಯೊಂದು ಯೋಜನೆಯ ಉಚಿತ ಮಾಹಿತಿ ಮತ್ತು ನಿಮ್ಮ ಉಳಿತಾಯದ ಹಣದ ಮೇಲೆ ಸಿಗುವ ಬಡ್ಡಿ ದರದ ಮಾಹಿತಿಯನ್ನು ತಿಳಿಸಲಿದ್ದೇವೆ. ಈ ಯೋಜನೆಗಳ ಬಗ್ಗೆ ನಿಮಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.