Solar Eclipse 2024 : ಸೂರ್ಯಗ್ರಹಣ ನಿಜಕ್ಕೂ ಭಾರತದಲ್ಲಿ ಗೋಚರಿಸುತ್ತಾ? ಗ್ರಹಣದ ವಿಧಿ ವಿಧಾನ ಅನುಸರಿಸಬೇಕಾ?

Share this Post

Solar Eclipse 2024 : ನಾಳೆ ಸಂಭವಿಸುತ್ತದೆ ಎನ್ನಲಾದ ವರ್ಷದ ಮೊದಲ ಸೂರ್ಯಗ್ರಹಣದ (Solar Eclipse) ಬಗ್ಗೆ ಜನರಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗುತ್ತಿವೆ. ಜನರ ಮುಗ್ಧ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಇಲ್ಲಸಲ್ಲದ ಊಹಾಪೋಹಗಳನ್ನು, ವದಂತಿಗಳನ್ನು ಹುಟ್ಟು ಹಾಕುತ್ತಿದ್ದಾರೆ.

WhatsApp Group Join Now
Telegram Group Join Now

ನಾಳೆ, ಅಂದರೆ ಇದೇ ಏಪ್ರಿಲ್ 8ರಂದು ಸಂಭವಿಸಲಿರುವ ಸೂರ್ಯಗ್ರಹಣ ಭಾರತದಲ್ಲಿ, ಅದರಲ್ಲೂ ಕರ್ನಾಕದಲ್ಲಿ ಗೋಚರಿಸುತ್ತದಾ? ಗ್ರಹಣ ಸಂದರ್ಭದಲ್ಲಿ ಮಾಡಬೇಕಾದ ವಿಧಿ ವಿಧಾನ, ಆಚರಣೆ ಅನುಸರಿಸಬೇಕಾ? ಎಂಬ ಡೌಟು ಹಲವರಲ್ಲಿದೆ. ಈ ಕುರಿತ ಮಾಹಿತಿ ಇಲ್ಲಿ ನೋಡೋಣ…

ಆಕಾಶದಲ್ಲಿ ಸಂಭವಿಸುವ ನಿಗೂಢ ಕೌತುಕ

ಅಸಲು ಆಕಾಶದಲ್ಲಿ ನಡೆಯುವ ಕೌತುಕಗಳಲ್ಲಿ ಗ್ರಹಣ ಕೂಡ ಒಂದು. ಪ್ರಪಂಚದಾದ್ಯ೦ತ ಸೂರ್ಯ ಹಾಗೂ ಚಂದ್ರಗ್ರಹಣಕ್ಕೆ (Lunar Eclipse) ಬಹಳಷ್ಟು ಪ್ರಾಮುಖ್ಯವಿದೆ. ಭಾರತದಲ್ಲಿ ಈ ಎರಡೂ ಗ್ರಹಣಗಳು ಹಲವು ವಿಶೇಷತೆ ಮತ್ತು ಮಹತ್ವಗಳನ್ನು ಹೊಂದಿದೆ. ಸಹಸ್ರಾರು ವರ್ಷಗಳಿಂದ ಮಾನವರನ್ನು ಆಕರ್ಷಿಸಿಸುತ್ತಿರುವ ಈ ಆಕಾಶದ ನಿಗೂಢ ಘಟನೆಗಳು ಮನುಷ್ಯನಲ್ಲಿ ಹಲವು ಕೌತುಕವನ್ನು ಹುಟ್ಟು ಹಾಕಿವೆ.

ಈ ವರ್ಷ ಅಂದರೆ 2024ರಲ್ಲಿ ಒಟ್ಟು ಎರಡು ಬಾರಿ ಸೂರ್ಯಗ್ರಹಣ, ಎರಡು ಬಾರಿ ಚಂದ್ರಗ್ರಹಣ ಸಂಭವಿಸಲಿದೆ. ಈಗಾಗಲೇ ಕಳೆದ ಮಾರ್ಚ್ 25ನೇ ತಾರೀಖು ಹೋಳಿ ಹುಣ್ಣುಮೆ ದಿನ ಮೊದಲ ಚಂದ್ರಗ್ರಹಣ ಸಂಭವಿಸಿದೆ. ಇದು ಈ ವರ್ಷದ ಮೊದಲ ಚಂದ್ರಗ್ರಹಣವಾಗಿದೆ. ನಂತರದ ಚಂದ್ರಗ್ರಹಣವು ಸೆಪ್ಟೆಂಬರ್ 18, 2024 ರಂದು ಸಂಭವಿಸಲಿದೆ.

ಇದನ್ನೂ ಓದಿ: PDO Recruitement Karnataka 2024 : ಗ್ರಾಮ ಪಂಚಾಯತಿ ಪಿಡಿಒ ನೇಮಕಾತಿ | 247 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ

ಭಾರತದಲ್ಲಿ ಗೋಚರಿಸುತ್ತಾ ಸೂರ್ಯಗ್ರಹಣ? Solar eclipse visible in India?

ಬಹುತೇಕರು ಬಲ್ಲಂತೆ ಸೂರ್ಯ ಹಾಗೂ ಚಂದ್ರ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸಿದರೆ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ವರ್ಷ ಎರಡು ಬಾರಿ ಸೂರ್ಯಗ್ರಹಣ ಆಗಲಿದ್ದು; ಮೊದಲ ಸೂರ್ಯ ಗ್ರಹಣ ನಾಳೆ (ಏಪ್ರಿಲ್ 8) ಅಮವಾಸ್ಯೆಯಂದು ಸಂಭವಿಸಲಿದೆ. ಹಾಗಾದರೆ ಈ ಗ್ರಹಣ ಭಾರತದಲ್ಲಿ ನಿಜಕ್ಕೂ ಗೋಚರಿಸುತ್ತದಾ?

ಪ್ರತೀ ಹುಣ್ಣ್ಣಿಮೆ ಹಾಗೂ ಅಮವಾಸ್ಯೆಗಳಂದು ಪ್ರಪಂಚದಾದ್ಯ೦ತ ಸೂರ್ಯ ಮತ್ತು ಚಂದ್ರಗ್ರಹಣಗಳು ನಡೆಯುತ್ತಿರುತ್ತವೆ. ಆದರೆ, ಎಲ್ಲ ಗ್ರಹಣಗಳೂ ಎಲ್ಲ ಭಾಗಗಳಲ್ಲೂ ಗೋಚರವಾಗುವುದಿಲ್ಲ. ನಮಗೆ ಗೋಚಾರವಾಗುವ ಗ್ರಹಣ ಮಾತ್ರ ಮಾನ್ಯವಾದ ಗ್ರಹಣವಾಗಿರುತ್ತದೆ. ಭಾರತದ ಅಕ್ಷಾಂಶ ರೇಖಾಂಶಗಳನ್ನು ಗಮನಿಸಿದಾಗ 8ನೇ ತಾರೀಕು ಸಂಭವಿಸುವ ಸೂರ್ಯಗ್ರಹಣ ಭಾರತಕ್ಕೆ ಇಲ್ಲ ಎನ್ನುತ್ತಾರೆ ಜ್ಯೋತಿಷಿಗಳು.

ಇದನ್ನೂ ಓದಿ: Pradhan Mantri Awas Yojana 2024 : ಸ್ವಂತ ಮನೆ ಕಟ್ಟಿಕೊಳ್ಳಲು ಸರಕಾರದ ಸಾಲ ಮತ್ತು ಸಬ್ಸಿಡಿ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಗ್ರಹಣದ ವಿಧಿ ವಿಧಾನ ಅನುಸರಿಸಬೇಕೆ? Eclipse rituals to be followed?

ಇದು ಸಹಜವಾಗಿಯೇ ಹುಟ್ಟುವ ಪ್ರಶ್ನೆ. ‘ಗ್ರಹಣ’ (Eclipse) ಎಂಬುವುದು ಭಾರತೀಯ ಆಸ್ತಿಕರಲ್ಲಿ ಅತ್ಯಂತ ಮಹತ್ವದ ಘಟನೆಯಾಗಿದೆ. ಬಹಳಷ್ಟು ಕಟ್ಟುನಿಟ್ಟಿನ ವಿಧಿ ವಿಧಾನಗಳನ್ನು ಗ್ರಹಣ ಸಮಯದಲ್ಲಿ ಅನುಸರಿಸುವುದುಂಟು. ನಾಳೆ ಸಂಭವಿಸಲಿರುವ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ, ಗ್ರಹಣದ ವಿಧಿ ವಿದಾನಗಳನ್ನು ಅನುಸರಿಸಬೇಕೆ?

ಈ ಗ್ರಹಣದ ಸಂದರ್ಭದಲ್ಲಿ ಯಾವುದೇ ವಿಧಿ ವಿಧಾನ ಅನುಸರಿಸುವ ಅಗತ್ಯವಿಲ್ಲ ಎನ್ನುತ್ತಾರೆ ಹಿರಿಯರು. ಈ ಗ್ರಹಣದಿಂದ ಭಾರತದ ಯಾವುದೇ ರೀತಿಯ ವಿಷಯಗಳಿಗೆ ಅಥವಾ ಜನರಿಗೆ ದೋಷ, ಲಾಭ ಇತ್ಯಾದಿಗಳೂ ಇರುವುದಿಲ್ಲ. ಹಾಗಾಗಿ ಯುಗಾದಿ ಹಬ್ಬವನ್ನು ನಿರಾತಂಕವಾಗಿ ಆಚರಿಸಿ ಹೊಸ ಸಂವತ್ಸರವನ್ನು ಸ್ವಾಗತಿಸೋಣ ಎಂಬ ಅಭಯವನ್ನು ಜ್ಯೋತಿಷಿಗಳು ನೀಡುತ್ತಾರೆ.

ಇದನ್ನೂ ಓದಿ: KPSC Land Surveyor Recruitment 2024 : ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ | ಪಿಯುಸಿ ಪಾಸಾಗಿದ್ರೆ ಅರ್ಜಿ ಸಲ್ಲಿಸಿ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಹಾಗಾದರೆ ಈ ಸೂರ್ಯ ಗ್ರಹಣ ಎಲ್ಲಿ ಗೋಚರಿಸುತ್ತದೆ? Where will this solar eclipse be visible?

ನಾಳೆ ಏಪ್ರಿಲ್ 8ರಂದು ಸಂಭವಿಸಲಿರುವ ಸೂರ್ಯಗ್ರಹಣದ ಒಟ್ಟು ಅವಧಿ 5 ಗಂಟೆ 10 ನಿಮಿಷಗಳಾಗಿದ್ದು; ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣವು ಏಪ್ರಿಲ್ 9 ರಂದು ರಾತ್ರಿ 9:12 ರಿಂದ 2:22ರ ವರೆಗೆ ಇರುತ್ತದೆ.

ಕೆನಡಾ, ಮೆಕ್ಸಿಕೋ, ಬರ್ಮುಡಾ, ಕೆರಿಬಿಯನ್ ನೆದರ್’ಲ್ಯಾಂಡ್, ಕೊಲಂಬಿಯಾ, ಕೋಸ್ಟಾ ರೈಸ್, ಕ್ಯೂಬಾ, ಡೊಮಿನಿಕಾ, ಗ್ರೀನ್’ಲ್ಯಾಂಡ್, ಐರ್ಲೆಂಡ್ ಮುಂತಾದ ವಿಶ್ವದ ವಿವಿಧ ಭಾಗಗಳಲ್ಲಿ ಇದು ಗೋಚರಿಸುತ್ತದೆ. ಭಾರತದಲ್ಲಿ ಇದರ ಗೋಚರ ಇಲ್ಲ!

ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?


Share this Post
WhatsApp Group Join Now
Telegram Group Join Now
error: Content is protected !!