Water is medicine – How much water is good for health? ನೀರೆಂಬ ದಿವ್ಯ ಔಷಧಿ | ಎಷ್ಟು ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ?

Share this Post

Water is medicine – How much water is good for health? : ನೀರು ಎಂದರೆ ಜೀವ ಜಲ. ವೈದ್ಯ ವಿಜ್ಞಾನದ ಪ್ರಕಾರ ಆಹಾರವಿಲ್ಲದೆ ತಿಂಗಳು ಕಾಲ ಬದುಕಿರಬಹುದು. ಆದರೆ ಒಂದು ವಾರ ನೀರು ಕುಡಿಯದಿದ್ದರೆ ಜೀವಿಸಿರಲಾರ. ಮನುಷ್ಯನಿಗೆ ನೀರು ಅದೆಷ್ಟು ಅಗತ್ಯವೆಂಬುದು ಇದರಿಂದಲೇ ಅರ್ಥವಾಗುತ್ತದೆ. ದೇಹದ ಎಲ್ಲಾ ಆಂತರಿಕ ಚಟುವಟಿಕೆಗಳಿಗೆ ನೀರು ಬಹಳ ಮುಖ್ಯ. ನಮ್ಮ ದೇಹದ ತೂಕದಲ್ಲಿ ಶೇಕಡಾ 60ರಷ್ಟು ಭಾಗ ನೀರಿದೆ. ಆಹಾರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ನೀರು ಬೇಕೆಬೇಕು…

WhatsApp Group Join Now
Telegram Group Join Now

ಆಹಾರದಲ್ಲಿರುವ ವಿಟಮಿನ್, ಖನಿಜ, ಗ್ಲೂಕೋಸ್, ಆಮ್ಲಗಳು ಮುಂತಾದವು ನೀರಿಲ್ಲದೆ ರಕ್ತದೊಳಗೆ ಸೇರಿಕೊಳ್ಳಲು ಆಗುವುದಿಲ್ಲ. ಜೀರ್ಣ ಕ್ರಿಯೆಯಲ್ಲಿ, ಪೌಷ್ಟಿಕಾಂಶ ಹೀರಿಕೆಯಲ್ಲಿ ಉಂಟಾಗುವ ಎಲ್ಲಾ ರಾಸಾಯನಿಕ ಕ್ರೀಯೆಗಳಿಗೆ ನೀರು ಅತ್ಯಗತ್ಯ. ದೇಹದ ಕಲ್ಮಶಗಳನ್ನು ಹೊರ ಹಾಕುವುದು ನೀರೆ. ದೇಹದ ಉಷ್ಣತೆ ಕಾಪಾಡಲು ಮತ್ತು ರಕ್ತದ ಪ್ರಮಾಣವನ್ನು ಸಮತೋಲನದಲ್ಲಿಡಲು ನೀರು ಅತೀ ಮುಖ್ಯ.

ದಿನಕ್ಕೆ 8 ರಿಂದ 12 ಲೋಟ ನೀರು ಕುಡಿಯಬೇಕು. ಇದು ವಯಸ್ಕರಿಗೆ ಮಾತ್ರ. ಮಕ್ಕಳಾದರೆ ಕಡಿಮೆ. ದೇಹದೊಳಗೆ ನೀರಿನ ಕೊರತೆ ಉಂಟಾದರೆ ಉಂಟಾಗುವ ದುಷ್ಪರಿಣಾಮಗಳು ಒಂದೆರಡಲ್ಲ. ಸಾಮಾನ್ಯ ಪ್ರಮಾಣದಲ್ಲಿ ಕೊರತೆಯಾದರೆ ಸುಸ್ತು, ತಾಳ್ಮೆ ಕಳೆದುಕೊಳ್ಳುವುದು. ಅದೇ ಶೇಕಡಾ 5 ರಿಂದ 6 ರಷ್ಟು ಕೊರತೆಯಾದರೆ ತಲೆನೋವು, ನಿದ್ರೆ ಬರುವುದು.

ಶೇಕಡಾ7 ರಿಂದ 10 ರಷ್ಟು ನೀರಿನ ಕೊರತೆ ಉಂಟಾದರೆ ತಲೆ ಸುತ್ತು, ಮುರ್ಛೆ. ಇದಕ್ಕಿಂತ ಹೆಚ್ಚು ಕೊರತೆ ಉಂಟಾದರೆ ರಕ್ತದ ಪ್ರಮಾಣ ಕಡಿಮೆ ಆಗುತ್ತದೆ. ಸಾಮಾನ್ಯಕ್ಕಿಂತ ಕಡಿಮೆಯಾದರೆ ರಕ್ತ ಸಂಚಾರ, ಮೂತ್ರಪಿಂಡ ಹಾಳಾಗುವ ಸಾಧ್ಯತೆ ಇರುತ್ತದೆ.

ದೇಹಕ್ಕೆ ನೀರಿನ ಅಗತ್ಯತೆ ಸಾಮಾನ್ಯವಾಗಿ ಬಾಯಾರಿಕೆ ಮೂಲಕ ಗೊತ್ತಾಗುತ್ತದೆ. ಹಸುಗೂಸುಗಳು, ಮಕ್ಕಳು, ವೃದ್ಧರಿಗೆ ನೀರಿನ ಅವಶ್ಯಕತೆ ಇದ್ದಾಗಲೂ ಬಾಯಾರಿಕೆ ಆಗುವುದಿಲ್ಲ. ಹಾಗಾಗಿ ಆಗಾಗ ಸ್ವಲ್ಪ ಸ್ವಲ್ಪ ನೀರು ಕುಡಿಸುತ್ತಿರಬೇಕು. ಅದು ಬೇಸಿಗೆಯ ಕಾಲದಲ್ಲಂತೂ ಬಹಳ ಮುಖ್ಯ. ಊಟಕ್ಕೆ ಮೊದಲು ಹಾಗೂ ಊಟ ಮಾಡುವಾಗ ನೀರು ಕುಡಿಯಬೇಕು. ಊಟ ಮುಗಿದ 30 ನಿಮಿಷಗಳ ನಂತರ ನೀರು ಕುಡಿಯಿರಿ. ಉಳಿದಂತೆ ನೀರು ಕುಡಿಯಲು ಸಮಯದ ನಿರ್ಬಂಧವಿಲ್ಲ.

ನೀರು ಕುಡಿಯದೇ ಕೆಲಕಾಲ ಬದುಕಬಹುದು. ಹಾಗಂತ ನೀರು ಕುಡಿಯದೇ ಇರುವುದು ಒಳ್ಳೆಯದಲ್ಲ. ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ನೀರು ಕುಡಿದರೆ ಏನೂ ತೊಂದರೆ ಇಲ್ಲ. ಆದರೆ ಬಹಳ ಮುಖ್ಯವಾಗಿ ನೆನಪಿಡಲೇಬೇಕಾದ ಅಂಶವೆ೦ದರೆ ಊಟಕ್ಕೆ ಮೊದಲು, ಊಟ ಮಾಡುವಾಗ ಅನೇಕರು ನೀರು ಕುಡಿಯುತ್ತಿರುತ್ತಾರೆ. ರೊಟ್ಟಿಯನ್ನೋ, ರಾಗಿ ಮುದ್ದೆಯನ್ನೋ ತಿಂದ ಮೇಲೆ ನೀರು ಕುಡಿಯುವುದು; ಆಮೇಲೆ ಅನ್ನ ಸೇವನೆ ನಂತರ ನೀರು ಕುಡಿಯುವುದು…. ಇದು ಖಂಡಿತ ಆರೋಗ್ಯಕರವಲ್ಲ. ಊಟದ ನಂತರ ಕೊಂಚ ಸಮಯ ಕಳೆದು ಕುಡಿಯುವುದು ಉತ್ತಮ.

ಇತ್ತೀಚೆಗಂತೂ ತಂಪೂ ಪಾನೀಯಗಳನ್ನು ಕುಡಿಯುವುದೇ ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಇದೊಂದು ಅಪಾಯಕಾರಿ ಹವ್ಯಾಸ. ಅದರಲ್ಲೂ ಊಟದ ಜೊತೆಗೆ ಕೂಲ್‌ಡ್ರಿಂಕ್ಸ್ ಕುಡಿದರೆ ಜೀರ್ಣಾಂಗಗಳ ಕೆಲಸ ಕಡಿಮೆಯಾಗಿ ತಿಂದದ್ದು ಪಚನಗೊಳ್ಳುವುದಿಲ್ಲ. ಬೇಸಿಗೆಯಲ್ಲಿ ಬೆವರು ಬರುವುದು ಜಾಸ್ತಿ. ಆಗ ದೇಹದಿಂದ ಹೆಚ್ಚು ಬೆವರು ಹೋಗುತ್ತದೆ.

ಆ ಸಮಯದಲ್ಲಿ ನೀರನ್ನು ದೇಹಕ್ಕೆ ಪೂರೈಸಬೇಕಾಗುತ್ತದೆ. ಇಲ್ಲದಿದ್ದರೆ ನಿರ್ಜಲತೆ ಉಂಟಾಗಿ ಜೀವಕ್ಕೆ ಅಪಾಯ! ನಮ್ಮ ದೇಹದ ತೂಕದ ಮುಕ್ಕಾಲು ಭಾಗ ನೀರೇ ಇರುತ್ತದೆ. ರಕ್ತದಲ್ಲಿ 80ರಷ್ಟು, ಮೆದುಳಿನಲ್ಲಿ 75ರಷ್ಟು, ಸ್ನಾಯುಗಳಲ್ಲಿ 70ರಷ್ಟು ನೀರೇ ಇರುತ್ತದೆ. ಈ ಅಂಗಾ೦ಗಗಳು ಸಮರ್ಪಕವಾಗಿ ಕೆಲಸ ಮಾಡಲು ನೀರು ಅತಿ ಅಗತ್ಯ. ನೀರು ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ದೇಹದಲ್ಲಿ ಉತ್ಪತ್ತಿಯಾದ ಕಲ್ಮಷವನ್ನು ಹೊರ ಹಾಕುತ್ತದೆ. ಜೀವ ಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕ ನೀಡುತ್ತದೆ. ಮೂತ್ರ ಕೋಶದಲ್ಲಿ ‘ಕಲ್ಲು’ ಇದ್ದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಸಣ್ಣ ಗಾತ್ರದ ಕಲ್ಲುಗಳು ತಾನಾಗಿಯೇ ಹೊರಗೆ ಹೋಗುತ್ತದೆ. ಜಾಸ್ತಿ ನೀರು ಕುಡಿಯುವುದರಿಂದ ದೊಡ್ಡ ಕರುಳು ಮತ್ತು ಮುತ್ರಾಶಯದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು.

ಮೂತ್ರ ಬಣ್ಣ ರಹಿತವಾಗಿದ್ದರೆ ನೀವು ಸಾಕಷ್ಟು ನೀರು ಕುಡಿದಿದ್ದೀರಿ ಎಂದರ್ಥ. ತಿಳಿ ಹಳದಿ ಅಥವಾ ಕೆಂಪು ಮಿಶ್ರಿತ ಹಳದಿಯಾಗಿದ್ದರೆ ನೀವು ನೀರು ಸಾಕಷ್ಟು ಕುಡಿದಿಲ್ಲ ಎಂದೇ ತಿಳಿಯಬೇಕು. ಚೆನ್ನಾಗಿ ನೀರು ಕುಡಿಯುತ್ತಿರಿ. ಅದು ಶುದ್ಧವಾದ ನೀರೇ ಆಗಿರಲಿ. ನಮ್ಮ ದೇಹದ ಅರ್ಧದಷ್ಟು ರೋಗಗಳು ಅಶುದ್ಧ ನೀರಿನಿಂದಲೇ ಬರುತ್ತವೆ ಎಂಬುದು ಗಮನಾರ್ಹ.

ನೀರನ್ನು ಜೀವ ಜಲ, ಸಂಜೀವಿನಿ, ಸರ್ವರೋಗ ನಿವಾರಕವೆಂದೇ ಬಣ್ಣಿಸಲಾಗಿದೆ. ಇದು ಆಧುನಿಕ ಕಾಲದ ಮಾತಲ್ಲ. ಪ್ರಾಚೀನ ಕಾಲದಲ್ಲೂ ವ್ಯಾಪಕವಾಗಿ ಪಾಲಿಸುತ್ತಿದ್ದ ವಿಷಯ. ಪ್ರಪಂಚದ ಅನೇಕ ಕಡೆ ಔಷಧಿಯುಕ್ತ ಗುಣಗಳಿರುವ ನೀರಿನ ಬುಗ್ಗೆಗಳು ಜನರನ್ನು ಆಕರ್ಷಿಸುತ್ತಿವೆ. ಒಟ್ಟಿನಲ್ಲಿ ನೀರು ಪ್ರಾಣ, ಆರೋಗ್ಯದ ಸಂಜೀವಿನಿ, ಸೌಂದರ್ಯದ ಖನಿ.


Share this Post
WhatsApp Group Join Now
Telegram Group Join Now
error: Content is protected !!