When is Karnataka 2nd PUC Result 2024 : ದ್ವಿತೀಯ ಪಿಯುಸಿ ಫಲಿತಾಂಶ 2024 ಯಾವಾಗ?

Share this Post

When is Karnataka 2nd PUC Result 2024 : ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಮಾರ್ಚ್ 1ರಿಂದ 22ರ ವರೆಗೆ ರಾಜ್ಯದ 1,120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ.

WhatsApp Group Join Now
Telegram Group Join Now

ಫಲಿತಾಂಶ ಪ್ರಕಟಣೆಯ ವಿಚಾರವಾಗಿ ನಾನಾ ನಮೂನೆ ವದಂತಿಗಳು ಹರಡುತ್ತಿವೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಒಳಗಾಗಿದ್ದು; ಈ ಸಂಬ೦ಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination and Assessment Board) ಅಧ್ಯಕ್ಷೆ ಎನ್. ಮಂಜುಶ್ರೀ ಅವರು ಇಂತಹ ಸುಳ್ಳುಸುದ್ದಿಗಳನ್ನು ನಂಬದಿರುವ೦ತೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: PDO Recruitement Karnataka 2024 : ಗ್ರಾಮ ಪಂಚಾಯತಿ ಪಿಡಿಒ ನೇಮಕಾತಿ | 247 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ

ಫಲಿತಾಂಶ ಯಾವಾಗ?

ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್ 21, 2023ರಂದು ಘೋಷಿಸಲಾಗಿತ್ತು. ಈ ವರ್ಷ ಕೂಡ ಇದೇ ದಿನಾಂಕದ ಆಸುಪಾಸಿನಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ. 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಏಪ್ರಿಲ್ 2024ರಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಬಹುದಾಗಿದೆ.

ಮೌಲ್ಯಮಾಪನ ಪ್ರಕ್ರಿಯೆ ಮುಗಿದ ಬಳಿಕ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಅವರು ಸಂಪೂರ್ಣ ಫಲಿತಾಂಶವನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಿದ್ದಾರೆ. ಆನಂತರ ಅಧಿಕೃತ ಜಾಲತಾಣದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಟಾಪರ್‌ಗಳು, ಜಿಲ್ಲಾವಾರು ಫಲಿತಾಂಶದ ವಿವರ ಲಭ್ಯವಾಗಲಿದೆ.

ಇದನ್ನೂ ಓದಿ: Aadhaar Card Update : ಆಧಾರ್ ಅಪ್ಡೇಟ್ | ನಿಮ್ಮ ಮೊಬೈಲ್‌ನಲ್ಲೇ ಅಪ್ಡೇಟ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ…

ಫಲಿತಾಂಶ ವೀಕ್ಷಣೆ ಹೇಗೆ?

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ವೀಕ್ಷಣೆಗಾಗಿ ಮೊದಲು ಇಲ್ಲಿ ಕ್ಲಿಕ್ ಮಾಡಿ…

Karnataka Examination Results 2024 ಮಂಡಳಿಯ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ Enter Reg No. ಬಾಕ್ಸ್’ನಲ್ಲಿ ನಿಮ್ಮ ರೋಲ್ ನಂಬರ್ ನಮೂದಿಸಿ, ಕೆಳಗಿರುವ Select Subject ಎಂಬ ಬಾಕ್ಸ್’ನಲ್ಲಿ ನಿಮ್ಮ ವಿಷಯವನ್ನು (ಕಲಾ, ವಿಜ್ಞಾನ, ವಾಣಿಜ್ಯ) ಆಯ್ಕೆ ಮಾಡಿ Submit ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ದೊರೆಯಲಿದೆ.

ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?


Share this Post
WhatsApp Group Join Now
Telegram Group Join Now
error: Content is protected !!